ಹುಬ್ಬಳ್ಳಿ : ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ ಹುಬ್ಬಳ್ಳಿಯ ಸುಳ್ಳ ಗ್ರಾಮದ ಗುರೂಜಿಯವರ ಸ್ವಂತ ಜಮೀನಿನಲ್ಲಿ ಮಾಡಲಾಗುತ್ತೆ. ಈ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚಿಸಲಾಗಿದೆ ಎಂದು ಪರಿಚಯಸ್ಥ ಮೋಹನ ಲಿಂಬಿಕಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪರಿಚಯಸ್ಥ ಮೋಹನ ಲಿಂಬಿಕಾಯಿ, ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುಳ್ಳ ಗ್ರಾಮದ ರಸ್ತೆಯ ಜಮೀನಿನಲ್ಲಿ ನಡೆಯಲಿದೆ. ಸದ್ಯ ಚಂದ್ರಶೇಖರ್ ಗುರೂಜಿ ಮೃತದೇಹ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆಯ ಬಳಿಕ ಹುಬ್ಬಳಿಯಲ್ಲಿಯೇ ಗುರೂಜಿಯ ಅಂತ್ಯಸಂಸ್ಕಾರ ನಡೆಯಲಿದೆ.
ಹುಬ್ಬಳ್ಳಿಯ ಕೇಶ್ವಾಪುರ ಸಮೀಪದ ಸುಳ್ಯ ರಸ್ತೆಯ ಚಂದ್ರಶೇಖರ್ ಗುರೂಜಿಯ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೇರವೇರಲಿದೆ. ಅಲ್ಲಿಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





