ಕನ್ನಡ ಬಿಗ್ ಬಾಸ್ ಒಟಿಟಿ ನಾಳೆಯಿಂದ ಪ್ರಾರಂಭವಾಗಲಿದೆ. ವೂಟ್ ಆಯಪ್‌ನಲ್ಲಿ ನಾಳೆಯಿಂದ ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ ಅವರೇ ಇದನ್ನು ನಡೆಸಿಕೊಡಲಿದ್ದಾರೆ.
ಈ ಬಾರಿ ಇಲ್ಲಿಯೂ 16 ಸ್ಪರ್ಧಿಗಳು ಇರಲಿದ್ದಾರೆ. ಸ್ಪರ್ಧಿಗಳ ಸಂಖ್ಯೆ 17 ಆಗಬಹುದು ಅಥವಾ 15 ಆಗಬಹುದು ಎಂದು ಕಲರ್ಸ್ ಕನ್ನಡ ಬಿಸ್‌ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಸಿನಿಮಾ, ಕಿರುತೆರೆಯಲ್ಲಿ ಖ್ಯಾತರಾದವರು, ಟಿವಿ ಪತ್ರಕರ್ತರ ಜೊತೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೂ ಮಣಿ ಹಾಕಲಾಗಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





