ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಆಪರೇಟಿವ್ ಸೊಸೈಟಿ ವತಿಯಿಂದ ಹುಬ್ಬಳ್ಳಿ ನಗರದ ಹಳೆ ಹುಬ್ಬಳ್ಳಿಯ ಸಿದ್ದಾರೂಡ ಮಠದ ಹತ್ತಿರದ ಶ್ರೀ ಆರೂಢ ಅಂಗವಿಕರ ಶಿಕ್ಷಣ ಸಮಿತಿ ನಡೆಸುತ್ತಿರುವ ಅಂಧಮಕ್ಕಳ ಶಾಲೆಯಲ್ಲಿ ಸೊಲ್ಲಾಪುರ ಚಾದರ ಮತ್ತು ಸಿಹಿತಿಂಡಿಯ ವಿತರಣೆ ಕಾರ್ಯಕ್ರಮವನ್ನುಆಯೋಜಿಸಿಲಾಗಿತ್ತು .
ಈ ಕಾರ್ಯಕ್ರಮಕ್ಕೆ ಶ್ರೀಯುತ ಜೆ . ಎಮ್ . ಕಾಳಿಮಿರ್ಚಿ ಪೊಲೀಸ್ ಇನ್ಸಪೆಕ್ಟರ್ ಗೋಕುಲ ರೋಡ್ ಪೊಲೀಸ್ ಸ್ಟೇಷನ್ ಹುಬ್ಬಳ್ಳಿ ಮತ್ತು ಎಮ್ ಎಮ್ ಸುಳ್ಳದ ನಿವೃತ್ತ ಪ್ರಾಂಶುಪಾಲರು ಸರಕಾರಿ ಫಸ್ಟ್ ಗ್ರೇಡ್ ಕಾಲೇಜ್ ಯಾದಗಿರಿ ಇವರು ಆಗಮಿಸಿದ್ದರು . ಸೊಸೈಟಿಯ ಅಭಿವ್ರುದ್ಧಿ ವ್ಯವಸ್ಥಾಪಕರಾದ ಶ್ರೀ ರೋಹನ್ ನಾಯ್ಕ , ಗೋಕುಲ ರೋಡ್ ಶಾಖೆಯ ಶಾಖಾ ವ್ಯವಸ್ಥಾಪಕರಾದ ಜಹೀರಅಬ್ಬಾಸ್ ಧಾರವಾಡ , ಶಾಂತಿನಗರದ ಶಾಖೆಯ ಶಾಖಾ ವ್ಯವಸ್ಥಾಪಕರಾದ ನಿಂಗಪ್ಪ ತಹಶೀಲ್ದಾರ , ಸಾಲ ವಸೂಲಾತಿ ಅಧಿಕಾರಿ ರೂಪೇಶ ಚಿಕ್ಕಮಠ , ಗೋಕುಲ ರೋಡ್ ಶಾಖೆಯ ಸಿಬ್ಬಂದಿಗಳು ಮತ್ತು ಪಿಗಿ ಏಜೆಂಟ್ ಉಪಸ್ಥಿತರಿರುತ್ತಾರೆ . ಈ ಬಾರಿ ರಾಜ್ಯದ ವಿವಿಧೆಡೆ 3 ಸಾವಿರ ವಿಕಲಚೇತನ ಹಾಗೂ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಸೊಲ್ಲಾಪುರ ಚಾದರವನ್ನು ವಿತರಿಸಲಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

