ಹುಬ್ಬಳ್ಳಿ: ಸಾಮಾನ್ಯವಾಗಿ ಪೋಲೀಸರ ಸ್ವಾತಂತ್ರ್ಯ ದಿನ ಆಚರಣೆ ಪೋಲಿಸ್ ಠಾಣೆಯಲ್ಲಿ ಧ್ವಜಾರೋಹಣ ಮಾಡಿ ಬೇರೆ ಕಡೆ ಬಂದೋಬಸ್ತ್ ಮಾಡುವದು ಆಗಿರುತ್ತದೆ. ಪೊಲೀಸ್ ಆಗಿ ಕರ್ತವ್ಯಕ್ಕೆ ಸೇರಿಕೊಂಡ ನಂತರ ಅವರ ಆಜಾದಿ ಮುಗಿದು ಹೋಯಿತು ಅನ್ನುವ ಸ್ಥಿತಿ ನಿರ್ಮಾಣ ಆಗುತ್ತದೆ. ಆದರೆ ಇಲ್ಲೊಬ್ಬ ಇನ್ಸಪೆಕ್ಟರ್ ಮತ್ತು ಅವರ ತಂಡ ತಮ್ಮ ಕರ್ತವ್ಯದ ನಡುವೆಯೂ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಬೈಕ್ ಮೇಲೆ ತಿರಂಗಾ ಯಾತ್ರೆಯನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಹೌದೂ ಸದಾ ಒಂದಿಲ್ಲೊಂದು ಬಂದೋಬಸ್ತ್ ನಲ್ಲಿ ವ್ಯಸ್ತವಾಗಿರುವ ಗೋಕುಲ ಪೋಲೀಸ ಠಾಣೆ ಪೊಲೀಸರು ತಮ್ಮ ಸಾಮಾಜಿಕ ಕಾಳಜಿಯಿಂದ ಸಿಂಘಮ್ ಎಂದು ಪ್ರಸಿದ್ಧಿ ಹೊಂದಿರುವ ಇನ್ಸಪೆಕ್ಟರ್ ಕಾಲಿಮಿರ್ಚಿ ನೇತೃತ್ವದಲ್ಲಿ ರಾಷ್ಟ್ರಧ್ವಜದ ಜೊತೆ ತಿರಂಗಾ ಯಾತ್ರೆಯನ್ನು ಗೋಕುಲ ಪೋಲೀಸ ಠಾಣೆ ವ್ಯಾಪ್ತಿಯಲ್ಲಿ ಮಾಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದ ಸಮಯದಲ್ಲಿ ಎಲ್ಲರೂ ದೇಶ ಪ್ರೇಮವನ್ನು ಮೆರೆಯುವ ಸಂದರ್ಭ ಅವರನ್ನು ನೋಡಿ ಯಾವುದೇ ಅವಘಡ ಆಗದ ಹಾಗೆ ರಕ್ಷಣೆ ನೀಡುವ ಪೋಲೀಸರು ಸಹ ತಿರಂಗಾ ಯಾತ್ರೆಯನ್ನು ಆಚರಿಸಿದ್ದು ಶ್ಲಾಘನೀಯವಾಗಿದೆ. ಇನ್ನೊಂದು ವಿಶೇಷತೆಯೆಂದರೆ ಯಾತ್ರೆಯಲ್ಲಿ ಭಾಗವಾಹಿಸಿದವರೆಲ್ಲ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿದ್ದು. ಸದಾ ಒಂದಿಲ್ಲೊಂದು ಹೊಸ ಪ್ರಯೋಗದಲ್ಲಿ ನಿರತ ಕಾಲಿಮೀರ್ಚಿ ಅವರಿಗೆ ನಮ್ಮದೊಂದು ಸಲ್ಯೂಟ್.
bigtvnews | Hubli Dharwad News | Kannada News | Karnataka News Hubli News | News In Hubli | Local news

