
ಹುಬ್ಬಳ್ಳಿಯಲ್ಲಿ ದಿನ ನಿತ್ಯ ಒಂದಿಲ್ಲ ಒಂದು ಹಲ್ಲೆಯ ಘಟನೆ ನಡಿತಾ ಇದೆ. ಇವತ್ತು ಕೂಡ ಇಬ್ಬರ ಮೇಲೆ ಚಾಕು ಇರಿತ ವಾಗಿದೆ.

ಹಳೆ ಹುಬ್ಬಳ್ಳಿಯ ಹೇಗ್ಗೆರಿ ಯಲ್ಲಿ ಸನ್ಮೂನ್ ಕಾಬಾಡೆ ಅನ್ನೋ ಯುವಕನಿಗೆ ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ಮಾಡಲಾಗಿದೆ. ಅನಿಲ್ ನಾಯ್ಕ್ ಅನ್ನೋ ವ್ಯಕ್ತಿ ಇಂದ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ.

ಹಾಗೂ ಕಸಬೇಪಟೆ ವ್ಯಾಪ್ತಿಯಲ್ಲಿ ಆಟೋ ಬಾಡಿಗೆ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿ ಅರ್ಬಾಜ್ ಅಕ್ತಾರ ಅನ್ನೋನಿಗೆ ಇರ್ಫಾನ್ ಅನ್ನೋ ವ್ಯಕ್ತಿ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಹಲ್ಲೆಗೆ ಒಳಗಾದವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಎಸಿಪಿ ಆರ್ ಕೆ ಪಾಟೀಲ್ ಹಾಗೂ ಹಳೆ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಹಳ್ಳುರ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

