ಬೆಂಗಳೂರು: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಪ್ರಾಜೆಕ್ಟ್ ಕೊಡಿಸೋದಾಗಿ ನಂಬಿಸಿ 15ಕ್ಕೂ ಹೆಚ್ಚು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೀಣ್ಯ ನಿವಾಸಿ ವಿನಯ್ ಎಂಬಾತ ಡಿಜಿಟಲ್ ಇಂಡಿಯಾ ಸ್ಕೀಮ್‌ನ ಪ್ರಾಜೆಕ್ಟ್ನಲ್ಲಿ ಇನ್ವೆಸ್ಟ್ ಮಾಡಿಸೋದಾಗಿ ನಂಬಿಸಿ ಸುಮಾರು 15 ಜನರಿಂದ ₹10 ಕೋಟಿಗೂ ಅಧಿಕ ಹಣವನ್ನ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ವಂಚನೆಗೆ ಪತ್ನಿ ಕೂಡ ಸಾಥ್ ನೀಡಿದ್ದು, ದಂಪತಿ ವಿರುದ್ಧ ಕೊಡಿಗೇಹಳ್ಳಿ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿವೆ. ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಲಾಗಿದೆ.ಆರೋಪಿ ವಿನಯ್ ತನಗೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯ ಅಂತಾ ಹೇಳಿಕೊಳ್ತಿದ್ದ. ಇದನ್ನ ನಂಬಿ ಹಣ ಹೂಡಿಕೆ ಮಾಡಲು ಬರುವವರಿಗೆ ನಂಬಿಸಲು ಐಎಎಸ್ ಅಧಿಕಾರಿಗಳ ಮೊಬೈಲ್ ನಂಬರ್ನಂತೆ ತನ್ನ ಮೊಬೈಲ್‌ನಲ್ಲಿ ಬೇರೊಂದು ಫೇಕ್ ನಂಬರ್ ಸೇವ್ ಮಾಡಿಕೊಂಡಿದ್ದ. ಅಧಿಕಾರಿಗಳ ಜೊತೆ ಚಾಟ್ ಮಾಡಿದಂತೆ ಫೇಕ್ ಮೆಸೇಜ್ಗಳನ್ನ ಹಣ ಹೂಡಿಕೆ ಮಾಡುವವರಿಗೆ ಕಳುಹಿಸಿ ಈತ ಅಧಿಕಾರಿಗಳಿಗೆ ಆಪ್ತನಂತೆ ನಂಬಿಸ್ತಿದ್ದ.2016ರಲ್ಲಿ ಚಾರ್ಟೆಡ್ ಅಕೌಂಟೆಂಟ್ ಶೆಟ್ಟಿ ಎಂಬುವವರಿಗೆ ಕೇಂದ್ರ ಸರ್ಕಾರದಿಂದ ಪ್ರಾಜೆಕ್ಟ್ ಕೊಡಿಸುವುದಾಗಿ ನಂಬಿಸಿ ₹60 ಲಕ್ಷ ಹೂಡಿಕೆ ಮಾಡಿಸಿ ವಂಚಿಸಿದ್ದ. ಮೊದಲು ಬೈಕ್‌ನಲ್ಲಿ ಓಡಾಡ್ತಿದ್ದ ವಿನಯ್ ಇಂದು ಐಷಾರಾಮಿ ಆಡಿ ಕಾರಿನಲ್ಲಿ ಸುತ್ತಾಡ್ತಿದ್ದಾನೆ ಅಂತಾ ಪೊಲೀಸರಿಗೆ ಮಾಹಿತಿ ಬಂದಿದೆ. ಡಿಜಿಟಲ್ ಇಂಡಿಯಾ ಪ್ರಾಜೆಕ್ಟ್ ಹೆಸರಲ್ಲಿ ವಂಚಿಸಿ ಸಂಪಾದಿಸಿದ ಹಣವನ್ನ ಆರೋಪಿ ವಿನಯ್ ಗೋವಾದಲ್ಲಿ ಕ್ಯಾಸಿನೋ ಬ್ಯುಸಿನೆಸ್ನಲ್ಲಿ ಹೂಡಿರೋ ಶಂಕೆಯಿದೆ. ಸದ್ಯ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಆರೋಪಿ ಪತ್ತೆಗಾಗಿ ಹುಡುಕಾಟ ಶುರುವಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





