ನವದೆಹಲಿ: ಇಂಡಿಯಾ ಪೋಸ್ಟ್ ನೇಮಕಾತಿ 2022: indiapost.gov.inನಲ್ಲಿ ದೇಶದ 23 ವಲಯಗಳಲ್ಲಿರುವ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಡಿಯಾ ಪೋಸ್ಟ್ಮ್ಯಾನ್, ಮೇಲ್ ಗಾರ್ಡ್ಗಳು ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ವೆಬ್ಸೈಟ್ನಿಂದ ನೇಮಕಾತಿ ಅಧಿಸೂಚನೆಯನ್ನು ಓದಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಒಟ್ಟು 98,083 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ರಾಷ್ಟ್ರದಾದ್ಯಂತ ಇರುವ ಸರಿ ಸುಮಾರು ೨೩ ವಲಯಗಳಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಲು ಅಂಚೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಇದಲ್ಲದೆ, ಇದೇ ನೇಮಕಾತಿಯಲ್ಲಿ ಶೀಘ್ರಲಿಪಿಗಾರ-ಸಂಬಂಧಿತ ಹುದ್ದೆಗಳಿಗೆ ವಲಯವಾರು ಅನುಮೋದನೆ ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ 1166 ಎಂಟಿಎಸ್ ಹುದ್ದೆಗಳು, 108 ಮೇಲ್ ಗಾರ್ಡ್ ಹುದ್ದೆಗಳು ಮತ್ತು 2289 ಪೋಸ್ಟ್ ಮನ್ ಹುದ್ದೆಗಳು ಮಂಜೂರಾಗಿವೆ. ತೆಲಂಗಾಣ ವೃತ್ತದ ಅಡಿಯಲ್ಲಿ 1553 ಪೋಸ್ಟ್ ಮ್ಯಾನ್ ಗಳು, 82 ಮೇಲ್ ಗಾರ್ಡ್ ಗಳು ಮತ್ತು 878 ಎಂಟಿಎಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

