Breaking News

ಮಲ್ಲಿಕ್ ಜಾನ್ ಕೊಲೆ ಪ್ರಕರಣ; ಪ್ರಮುಖ ಆರೋಪಿ ರವಿ ಜಾಧ ಆರೆಸ್ಟ್ …!

ಹುಬ್ಬಳ್ಳಿ ಕಳೆದ ಒಂದು ತಿಂಗಳ ಹಿಂದೆ ಹುಬ್ಬಳ್ಳಿಯ ಮಂಟೂರ ರೋಡ್ ಬ್ಯಾಳಿ ಪ್ಲಾಟ್ ಬಳಿ ಮಹಮ್ಮದ್ ಮಲಿಕ್ ಜಾನ್ ಮೇಲೆ ಸೆಟ್ಲಿಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬೆಂಡಿಗೇರಿ ಠಾಣೆ ಬಂಧಿಸಿದ್ದರು. ಆದ್ರೆ ಪ್ರಮುಖ ಆರೋಪಿ ರವಿ ಜಾಧವನನ್ನು ಇಂದು ಬಂಧಿಸಿದ್ದಾರೆ. ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಎಸ್.ಆರ್ ನಾಯ್ಕ್ ಅವರು ಇಂದು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಮಂಟೂರ ರೋಡ್ ರೌಡಿಶೀಟರ್ ಎಂ ಡಿ ದಾವೂದ್ ಮತ್ತು ಸೆಟ್ಲಿಮೆಂಟ್ ಶ್ಯಾಮ್ ಜಾಧವ ಈ ಎರಡು ಗ್ಯಾಂಗ್‌ಗಳ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದ್ರೆ ಕಳೆದ ಒಂದು ತಿಂಗಳ ಹಿಂದೆ ಎರಡು ಗುಂಪಿನ ವಾರ್ ವಿಕೋಪಕ್ಕೆ‌ ತಿರುಗಿ ಕೊಲೆ ಮಾಡೊ ಹಂತ ಕೂಡ ತಲುಪಿದ್ರೂ, ಶ್ಯಾಮ್ ಜಾಧವ ಗ್ಯಾಂಗ್‌ದಲ್ಲಿ ಗುರುತಿಸಿಕೊಂಡಿದ್ದ ಪುಡಿ ರೌಡಿಗಳು ಎಂಡಿ ದಾವೂದ್‌ ರೈಟ್ ಹ್ಯಾಂಡ್ ಆಗಿದ್ದ ಮಹಮ್ಮದ್ ಮಲಿಕ್ ಜಾನ್‌ನನ್ನು ಒಬ್ಬಂಟಿಯಿದ್ದಾಗ ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆ್ಯಂಡ್ ಟೀಮ್ ಈಗಾಗಲೇ 15 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಕೊಲೆ ಪ್ರಕರಣದಲ್ಲಿದ್ದ ಪ್ರಮುಖ ಆರೋಪಿ ರವಿ ಜಾಧವ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಇಂದು ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಸಮೀಪದ ಅಂಚಟಗೇರಿ ಊರಿನ ಹೊಲದಲ್ಲಿ ಶೆಡ್‌ದಲ್ಲಿ ಬಚ್ಚಿಕೊಂಡಿದ್ದ, ರವಿ ಜಾಧವನನ್ನು ಬೆನ್ನತ್ತಿದ್ದ ಬೆಂಡಿಗೇರಿ ಪೊಲೀಸರು ಅವನನ್ನು ಇಂದು ಅರೆಸ್ಟ್ ಮಾಡಿದ್ದಾರೆ. ಮಹಮ್ಮದ್ ಮಲಿಕ್ ಜಾನ್ ಕೊಲೆ ಪ್ರಕರಣದಲ್ಲಿ ಪೊಲೀಸರು ರವಿ ಜಾಧವ ಅರೆಸ್ಟ್ ಮಾಡಿದ್ದು, ಆರೋಪಿಗಳ ಸಂಖ್ಯೆ 16 ಕ್ಕೆ ಏರಿದೆ. ಇನ್ನೂ ಈ‌ ಕೊಲೆ ಪ್ರಕರಣದಲ್ಲಿ ಯಾರಾರು ಇದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *