ಧಾರವಾಡ : ತಾಲೂಕಿನ ಕವಲಗೇರಿ ಗ್ರಾಮದ ಬಸಪ್ಪ ಗಂಗೋಜಿ( ಸಂಕಲೀಪುರ )ಎಂಬುವವರಿಗೆ ಸೇರಿದ ದನ ಕಟ್ಟುವ ಶೆಡ್ ಗೆ ಬೆಂಕಿ ತಗುಲಿ ಎರಡು ಎತ್ತುಗಳು ಹಾಗೂ ಒಂದು ಆಕಳು ಸೇರಿ ಮೂರು ದನಗಳು ಸುಟ್ಟು ಕರಕಲು ಆಗಿರುವ ಘಟನೆ ಜರುಗಿದೆ.

ಬೆಂಕಿ ಹೇಗೆ ತಗುಲಿತು ಎಂಬುವುದರ ಕುರಿತು ಮಾಹಿತಿ ದೊರೆತಿಲ್ಲ ವಿಷಯ ತಿಳಿದ ತಕ್ಷಣ ಗ್ರಾಮದ ಜನರು ಶೆಡ್ ಬಳಿ ತೆರಳಿ ಬೆಂಕಿ ನಂದಿಸಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

