Breaking News

ಹಾಳಾಗಿದ್ದ ಬಸ್ ತಂಗುದಾನಕ್ಕೆ ಜೀವ ಕಳೆಯಿಟ್ಟ ಯುವಕರು

ಹುಬ್ಬಳ್ಳಿ: ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೇಶವಾಪುರದ ಸರ್ಕಾರಿ ಬಸ್ ನಿಲ್ದಾಣ ಸುಮಾರು ವರ್ಷಗಳಿಂದ ನಿರ್ವಹಣೆ ಇಲ್ಲದೆ ದುಃಸ್ಥಿತಿಗೆ ತಲುಪಿತ್ತು ಇದನ್ನು ಗಮನಿಸಿದ ಸ್ಥಳೀಯ ಭಗತ್ ಸಿಂಗ್ ಸೇವಾ ಸಂಸ್ಥೆಯ ವಿಶಾಲ್ ಜಾಧವ್,ಅನು ಹಾಗು ಹತ್ತಾರು ಸ್ಥಳೀಯ ಯುವಕರು ಸೇರಿ ಬಸ್ ನಿಲ್ದಾಣಕ್ಕೆ ಮರು ಜೀವ ನೀಡಿದ್ದಾರೆ ,ಹಳದಿ ಕೆಂಪು ಬಣ್ಣ ಬಳಿದ ,ಬಸ್ ನಿಲ್ದಾಣವನ್ನು ಶುಭ್ರವಾಗಿರಿಸಿ ಸೈ ಎನಿಸಿಕೊಂಡಿದ್ದಾರೆ , ಸದ್ಯ ಯುವಕರ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದು ,ಸಂಘ ಸಂಸ್ಥೆಗಳು ಇದೆ ರೀತಿಯಾಗಿ ಮಾಡಬೇಕು ಎಂದು ಹಾರೈಸಿದ್ದಾರೆ.

ಇನ್ನು ಮತ್ತೊಂದು ಕಡೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುಂಚೆ ಇದ್ದ ಬಸ್ ತಂಗುದಾನಗಳ ನಿರ್ವಹಣೆ ಮಾಡದೆ ರಾತ್ರೋ ರಾತ್ರಿ ಹೊಸ ಬಸ್ ತಂಗುದಾನಗಳನ್ನ ತಯಾರು ಮಾಡುತ್ತಿದೆ,ಇದು ಅಭಿವೃದ್ಧಿಯೊ ಅಥವಾ ಲಾಭಕ್ಕಾಗಿ ನಡೆಸುತ್ತಿರುವ ಕಾಮಗರಿಯೋ ಎಂದು ಸಾರ್ವಜನಿಕರು ಪ್ರಶ್ನಿಸುವ ರೀತಿ ಆಗಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *