Breaking News

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಗ್ರಸ್ಥಾನ..

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಮೂರು ತಿಂಗಳಿನಿಂದ ವಿಶ್ವದ ಅತ್ಯಂತ ಸಮಯದ ವಿಮಾನ ನಿಲ್ದಾಣವಾಗಿ ಅಗ್ರಸ್ಥಾನದಲ್ಲಿದೆ ಎಂದು ಸಿರಿಯಮ್‌ನ ‘ದಿ ಆನ್-ಟೈಮ್ ಪರ್ಮೆನ್ಸ್ ಮಾಸಿಕ ವರದಿ’ ತಿಳಿಸಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸರಿಯಾಗಿ ನಿರ್ಗಮಿಸುವ ಅನುಭವವನ್ನು ಉಳಿಸಿಕೊಂಡಿದೆ, ಜುಲೈ ತಿಂಗಳಿನಲ್ಲಿ 87.51 ರಷ್ಟು ಸಮಯಪಾಲನೆ, ಆಗಸ್ಟ್‌ನಲ್ಲಿ 89.66 ಮತ್ತು ಸೆಪ್ಟೆಂಬರ್‌ನಲ್ಲಿ ಶೇಕಡಾ 88.51 ಸಮಯ ಪರಿಪಾಲನೆ ಮಾಡಿದೆ ಎಂದು ಬಿಐಎಎಲ್ ಮಂಗಳವಾರ ತಿಳಿಸಿದೆ.

ವರದಿಯ ಪ್ರಕಾರ, ಆನ್-ಟೈಮ್ ನಿರ್ಗಮನ ಶ್ರೇಯಾಂಕವು ನಿಗದಿತ ಸಮಯದ 15 ನಿಮಿಷಗಳ ಒಳಗೆ ನಿರ್ಗಮಿಸಿದ ವಿಮಾನಗಳು ಶೇಕಡಾವಾರು ಸಂಖ್ಯೆಯನ್ನು ಅಳೆಯುತ್ತದೆ. ಸಿರಿಯಮ್‌ನ ಮೌಲ್ಯಮಾಪನ ಪ್ರಕ್ರಿಯೆಯು ವಿಶ್ವಾದ್ಯಂತ ವಿಮಾನ ನಿಲ್ದಾಣಗಳಿಗೆ ವಿಮಾನಯಾನ ಡೇಟಾದ ಸಂಪೂರ್ಣ ಪರಿಶೀಲನೆ ನೀಡಲಿದೆ ಎಂದು ವರದಿ ಹೇಳಿದೆ.

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *