Breaking News

ಕೊಡಗಿನಲ್ಲಿ ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ : ಸಿದ್ದರಾಮಯ್ಯ


ಬೆಂಗಳೂರು : ‘ಕೊಡಗಿನಲ್ಲಿ ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಅಂದು ಅಕ್ಕಿರೊಟ್ಟಿ, ಕಳಲೆ ಪಲ್ಯ ತಿಂದಿದ್ದೆ. ಇದೇ ವಾಸ್ತವ ವಿಚಾರ. ಕೇವಲ ವಾದದ ಉದ್ದೇಶದಿಂದ ಮಾಂಸ ತಿಂದು ಬಂದರೆ ಸಮಸ್ಯೆ ಏನು ಎಂದು ಪ್ರಶ್ನಿಸಿದ್ದೆ ಅಷ್ಟೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡಗಿನಲ್ಲಿ ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆವತ್ತು ವಿಧಾನ ಪರಿಷತ್‌ ಸದಸ್ಯರಾದ ನಮ್ಮ ಪಕ್ಷದ ವೀಣಾ ಅಚ್ಚಯ್ಯ ಅವರು ನಾಟಿ ಕೋಳಿ ಸಾರು ಮಾಡಿಕೊಂಡು ಬಂದಿದ್ದರು. ಜೊತೆಗೆ ಅಕ್ಕಿರೊಟ್ಟಿ, ಕಳಲೆ ಪಲ್ಯ ತಂದಿದ್ದರು. ಆದರೆ, ನನಗೆ ಅಂದು ಮಾಂಸದೂಟ ಮಾಡಲು ಇಷ್ಟವಾಗಲಿಲ್ಲ. ಹಾಗಾಗಿ ರೊಟ್ಟಿಪಲ್ಯ ತಿಂದೆ. ಇದನ್ನು ವೀಣಾ ಅಚ್ಚಯ್ಯ ಅವರೂ ಹೇಳಿದ್ದಾರೆ. ಪ್ರಮೋದ್‌ ಮುತಾಲಿಕ್‌ ಕೂಡ ನಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅವರು ಹಿಂದೂ ಸಂಘಟನೆ ಅಧ್ಯಕ್ಷರಲ್ಲವೇ?’ ಎಂದು ಪ್ರಶ್ನಿಸಿದರು.

Share News

About BigTv News

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *