ಅರಸೀಕೆರೆ : ಫೇಸ್ಬುಕ್ನಲ್ಲಿ ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಒಂದು ತಂಡವನ್ನ ಅರಸೀಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಗೌಡ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತರಲ್ಲಿ ಒರ್ವ ಮಹಿಳೆ ಸೇರಿ ಐವರನ್ನ ಬಂಧಿಸಲಾಗಿದೆ. ಅರ್ಪಿತಾ, ಪವನ, ಕಿರಣ, ದೊರೆ, ಮತ್ತು ಹೇಮೇಶ್ ಬಂಧಿತ ಆರೋಪಿಗಳು. ಇವರು ತುಮಕೂರು, ಬೆಂಗಳೂರು ಮತ್ತು ಹಾಸನ ಮೂಲದವರು ಎಂದು ತಿಳಿದು ಬಂದಿದೆ. ಆರೋಪಿಗಳು ಫೇಸ್ಬುಕ್ನಲ್ಲಿ ಹನಿಟ್ರ್ಯಾಪ್ ಮಾಡಿ, ಜಾಲಕ್ಕೆ ಬಲಿಯಾಗುತ್ತಿದ್ದವರಿಂದ ಹಣ ಸುಲಿಗೆ ಮಾಡುತಿದ್ದರು. ಬಂಧಿತರಿಂದ ಎರಡು ಕಾರ್, ಒಂದು ಬೈಕ್, ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಪ್ರಕಾಶ್ ಗೌಡ ತಿಳಿಸಿದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





