Breaking News

ಅನುಮಾನ ಭೂತದಡಿ ಪತ್ನಿಯನ್ನು ಬಲಿ ಪಡೆದ ಪಾಪಿ ಪತಿ


ಬೆಂಗಳೂರು : ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯ ಕುತ್ತಿಗೆ ಸೀಳಿ ಪತಿಯೇ ಕೊಲೆ ಮಾಡಿರುವ ಘಟನೆ ಕೆಆರ್ ಪುರಂ ನ್ಯಾನ್ಸಿ ಪ್ಲೋರಾ(29) ಮೃತ ಗೃಹಿಣಿ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಜಾನ್ ಸುಪ್ರಿತ್​ನನ್ನು ಬಂಧಿಸಲಾಗಿದೆ.

ಶಾಮಿಯಾನ ಹಾಕುವ ಉದ್ಯಮ ಮಾಡುತ್ತಿದ್ದ ಜಾನ್ ಸುಪ್ರಿತ್ ಕಳೆದ ಎಂಟು ವರ್ಷಗಳ ಹಿಂದೆ ನ್ಯಾನ್ಸಿ ಪ್ಲೋರಾಳನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅನೈತಿಕ ಸಂಬಂಧದ ಅನುಮಾನದಲ್ಲಿ ಮನೆಯಲ್ಲಿ ಆಗಾಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ಸಂಜೆ ಸುಮಾರು 6 ಗಂಟೆಗೆ ಪತ್ನಿಯ ಕತ್ತು ಸೀಳಿ ಕೊಲೆಮಾಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಕೆ.ಆರ್.ಪುರಂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *