ಹುಟ್ಟು ಹಬ್ಬ ಆಚರಿಸಬೇಕಾದ ಹೆತ್ತವರು ಅವರನ್ನ ಪೊದೆಯಲ್ಲಿ ಬಿಸಾಕಿದ್ರು. ಆದ್ರೇ ತವರಿನ ಮಡಿಲು ಇವರನ್ನ ರಕ್ಷಿಸಿ ಮರು ಜೀವ ನೀಡಿತ್ತು. ಆ ಜೀವಗಳಿಗೆ ಇಂದು ವರುಷದ ಸಂಭ್ರಮ. ಆ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು ತವರು ಚಾರಿಟಬಲ್ ಟ್ರಸ್ಟ್.
ತನಗರಿವಿಲ್ಲದಂತೆ ಆಟವಾಡುತ್ತಿರುವ ಮತ್ತು ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಅನಾಥ ಮಕ್ಕಳಿಬ್ಬರ ಹುಟ್ಟುಹಬ್ಬ ಆಚರಣೆ. ಅಮೇರಿಕಾ ಪ್ರಜೆಗಳಿಬ್ಬರು
ದತ್ತು ಪಡೆದು ಹೊಸ ಜೀವನ ನೀಡಿದ ಕ್ಷಣ. ಈ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾದರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಅಷ್ಟಕ್ಕೂ ಈ ಹುಟ್ಟು ಹಬ್ಬ ನಡೆದಿದ್ದು, ಪುಟ್ಟ ಕಂದಮ್ಮಗಳಾದ ಅನ್ವಿತಾ ಹಾಗೂ ಶರತ್ರದ್ದು. ಹುಟ್ಟು ಹಬ್ಬದಂದು ಇಬ್ನರನ್ನೂ ವಿದೇಶಿ ಜೋಡಿಗಳು ದತ್ತು ಸ್ವೀಕರಿಸಿದ್ದಾರೆ. ಶರತ್ ನ ಅಮೇರಿಕದ ಹೊಸ ತಂದೆ ತಾಯಿಗಳು ಇಂದು ತವರು ಚಾರಿಟಬಲ್ ಟ್ರಸ್ಟ್ ನಲ್ಲಿ ನಡೆದ ಮೊದಲ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಮಗವನ್ನು ಎದೆಗಪ್ಪಿಕೊಂಡು ಆನಂದಿಸಿದರು. ಇದರ ಜೊತೆಗೆ ನಂದಿನಿ ಎಂಬ ಮತ್ತೊಂದು ಅನಾಥ ಮಗುವನ್ನು ದತ್ತು ಸ್ವೀಕಾರ ಮಾಡಿದ ಅಮೇರಿಕದ ಪೋಷಕರು ಕೂಡ
ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಹುಟ್ಟು ಹಬ್ಬ ಆಚರಿಸಿಕೊಂಡ ಮತ್ತೊಂದು ಮಗು ಅನ್ವಿತಾ ಕೂಡ ಅಮೆರಿಕದ ದಂಪತಿಗಳಿಂದ ದತ್ತು ಸ್ವೀಕರಿಸಲ್ಪಟ್ಟಿದ್ದು ವಿಸಾ ಪಡೆದ ನಂತರ ಕೆಲ ದಿನಗಳಲ್ಲಿ ಹಾಸನಕ್ಕೆ ಆಗಮಿಸಿ ಅನ್ವಿತಾಳನ್ನು ವಿದೇಶಕ್ಕೆ ಕರೆದೊಯ್ಯಲಿದ್ದಾರೆ. ಅನ್ವಿತಾ ಕಳೆದ ವರ್ಷ ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿ ಪೊದೆಗೆ ಬಿಸಾಡಲ್ಪಟ್ಟವಳು. ನವಿಲುಗಳಿಗೆ ಆಹಾರವಾಗಿ ಸಾವನ್ನು ಎದುರು ನೋಡುತ್ತಾ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಂದಮ್ಮ. ಸಾರ್ವಜನಿಕ ರಿಂದ ರಕ್ಷಿಸಲ್ಪಟ್ಟು ಹೊಳೆನರಸೀಪುರ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದು ಹಾಸನದ ಜಿಲ್ಲಾ ಆಸ್ಪತ್ರೆಗೆ ರವಾನಿಸಲ್ಪಟ್ಟಿದ್ದ ಮಗು.
ತೀವ್ರ ನಿಗಾ ಘಟಕದಲ್ಲಿ ವೈದ್ಯರು, ಶುಶ್ರೂಷಕರ. ವಿಶೇಷ ಕಾಳಜಿ,ಚಿಕಿತ್ಸೆ, ಹಾರೈಕೆಯಿಂದ ಬದುಕಿ ಉಳಿದಿದ್ದ ದೇವರ ಕಂದಮ್ಮನಿದು.
ಇಂದು ಡಾ. ಪಾಲಾಕ್ಷ ಅವರ ನೇತ್ರತ್ವದಲ್ಲಿ ನಡೆಯುತ್ತಿರುವ ತವರು ಚಾರಿಟಬಲ್ ಟ್ರಸ್ಟ್ ನಲ್ಲಿ ಆಶ್ರಯ ಪಡೆದು ಮೊದಲ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾಳೆ. ಇನ್ನು 15 ದಿನದಲ್ಲಿ ಈ ಮುದ್ದು ಮಕ್ಕಳು ಜಿಲ್ಲಾಡಳಿತದ ಸಮ್ಮುಖದಲ್ಲಿ ವಿದೇಶಿ ಅತಿಥಿಗಳ ಸಮ್ಮುಖದಲ್ಲಿ ಸಧ್ಯದಲ್ಲೇ ಅಮೇರಿಕಾಕ್ಕೆ ಹಾರಲಿದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೊಹಿಣಿ ಸಿಂಧೂರಿ ಪಾಲ್ಗೊಂಡು ಮಕ್ಕಳ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು. ಅನ್ವಿತಾ ನವಜಾತ ಶಿಶುವಾಗಿದ್ದಾಗ ಅನುಭವಿಸಿದ ನೂವುಗಳನ್ನು ಕಣ್ಣಾರೆ ಕಂಡವರು ಜಿಲ್ಲಾಧಿಕಾರಿ. ಆಗಲೇ ಹೆಚ್ಚಿನ ಕಾಳಜಿ ವಹಿಸಿ ವೈದ್ಯಾಧಿಕಾರಿಗಳಿಗೆ ತಿಳಿಸಿ, ಹೆಚ್ವಿನ ಚಿಕಿತ್ಸೆ ಕೊಡಿಸಿ ನಿರಂತರ ಮಾಹಿತಿ ಪಡೆದಿದ್ದರು.
ಅದನ್ನು ಇಂದು ರೋಹಿಣಿ ಸಿಂಧೂರಿ ನೆನೆಪು ಮಾಡಿಕೊಂಡು ಅನ್ವಿತಾಳ ಇಂದಿನ ನಗುವಿಗೆ, ಯಶಸ್ಸಿಗೆ ಕಾರಣರಾದ ಎಲ್ಲಾ ವೈದ್ಯರು ಹಾಗೂ ತವರು ಚಾರಿಟೇಬಲ್ ಟ್ರಸ್ಟ್ ಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಮ್ಸ್ ನ ಶಿಶುಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಅವರು ಜಿಲ್ಲಾಧಿಕಾರಿ ಅನ್ವಿತಾಳ ಬಗ್ಗೆ ತೋರಿದ ಮಮತೆ ಹಾಸನಾಂಭ ವೈದ್ಯಕೀಯ ಆಸ್ಪತ್ರೆಯ ನವಜಾತ ಶಿಶುವಿನ ಚಿಕಿತ್ಸಾ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಕೈಗೊಂಡ ಕ್ರಮ ಅನ್ವಿತಾ ಸೇರಿದಂತೆ ಸಂಕಷ್ಟದಲ್ಲಿದ್ದ ನವಜಾತ ಶಿಶುಗಳ ಬಗ್ಗೆ ತೋರಿದ ಕಾಳಜಿಯನ್ನು ಸ್ಮರಿಸಿ ಕೃತಜ್ಞತೆ ಸಮರ್ಪಿಸಿದರು.
ಹೆತ್ತವರು ಎಸೆದು ಹೊದರೇನು..!ಇದು ಆ ದೇವರು ಬರೆದಿರುವ ಹಣೆ ಬರಹ. ಹೊಸ ಬದುಕಿನ ಹಾದಿ ಹಿಡಿಯಲಿದ್ದಾರೆ ಈ ಪುಟ್ಟ ಕಂದಮ್ಮಗಳು. ಜೊತೆಗೆ ಅನ್ವಿತಾಳ ಜೀವನದ ದಿಕ್ಕು ಬದಲಾಗಿದೆ. ಲಕ್ಕು ಬದಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





