Breaking News

ತಿರುಪತಿಯಲ್ಲಿ ಸಪ್ತಪದಿ ತುಳಿದ ಕಿರುತೆರೆ ಚಲುವೆ, ಖ್ಯಾತ ನಿರ್ಮಾಪಕ


ತಮಿಳು ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ , ನಿರೂಪಕಿ ಮಹಾಲಕ್ಷ್ಮೀ ಅವರ ವಿವಾಹ ಇಂದು ನಡೆದಿದೆ . ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರೊಂದಿಗೆ ಮಹಾಲಕ್ಷ್ಮೀ ಅವರ ಮದುವೆ ಕಾರ್ಯ ನಡೆದಿದೆ . ಮಹಾಲಕ್ಷ್ಮೀ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ . ಈ ಫೋಟೋಗಳನ್ನು ಅವ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ .

ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ . ಕೆಲವರು ನಟಿಯ ಆಯ್ಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ . ತಿರುಪತಿಯಲ್ಲಿ ಈ ಮದುವೆ ಕಾರ್ಯ ನಡೆದಿದೆ . ತಿರುಪತಿಯಲ್ಲಿ ಈ ಮದುವೆ ಕಾರ್ಯ ನಡೆದಿದೆ .

ಇಬ್ಬರಿಗೂ ಇದು ಎರಡನೇ ಮದುವೆ . ‘ ನನ್ನ ಜೀವನದಲ್ಲಿ ನಿಮ್ಮನ್ನು ಪಡೆದುಕೊಳ್ಳಲು ನಾನು ತುಂಬಾ ಅದೃಷ್ಟ ಮಾಡಿದ್ದೆ . ನನ್ನ ಜೀವನದಲ್ಲಿ ನೀವು ಪ್ರೀತಿ ತುಂಬಿದ್ದೀರಿ . ಲವ್ ಯೂ ‘ ಎಂದು ಮಹಾಲಕ್ಷ್ಮೀ ಬರೆದುಕೊಂಡಿದ್ದಾರೆ . ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ .

ಕೆಲವರು ಮಹಾಲಕ್ಷ್ಮೀ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ . ಶುಭಾಶಯ ತಿಳಿಸಿದ್ದಾರೆ . ಆದರೆಒಂದು ವರ್ಗದ ಜನರು ಈ ವಿವಾಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ . ‘ ಇದು ನಿಜವಾದ ಮದುವೆಯೋ ಅಥವಾ ಧಾರಾವಾಹಿಯ ಮದುವೆಯೋ ‘ ಎಂದು ಪ್ರಶ್ನೆ ಮಾಡಿದ್ದಾರೆ . ಇನ್ನೂ ಕೆಲವರು ‘ ನನ್ನ ಬಳಿ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ‘ ಎಂದು ಕಮೆಂಟ್ ಮಾಡಿದ್ದಾರೆ . ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮೀ ಒಂದೇ ಇಂಡಸ್ಟ್ರಿಯಲ್ಲಿ ಇದ್ದವರು . ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು . ರವೀಂದರ್ ನಿರ್ಮಾಣದ ‘ ವಿಡಿಯುಮ್ ವಾರೈ ಕಾಥಿರು ‘ ಸಿನಿಮಾದಲ್ಲೂ ಮಹಾಲಕ್ಷ್ಮೀ ಅಭಿನಯಿಸಿದ್ದರು .

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *