ಹುಬ್ಬಳ್ಳಿ : ವಯಸ್ಸಾಯ್ತು ಇನ್ನೇನು ಸಾಧನೆ ಮಾಡಲು ಸಾಧ್ಯ ಎಂದು ಗೊಣಗುವವರಿಗೆ ಈ ವ್ಯಕ್ತಿ ವಿಭಿನ್ನ . ಐವತ್ತರ ವಯಸ್ಸಿನಲ್ಲೂ ಆಫ್ರಿಕಾದ ಅತೀ ದೊಡ್ಡ ಶಿಖರ ಕಿಲಿಮಾಂಜರೋ ಪರ್ವತ ಚಾರಣ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ,

ಈ ಸಾಹಸಿ ಕನ್ನಡಿಗ ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ . ಹೀಗೆ ದಕ್ಷಿಣ ಆಫ್ರಿಕಾ ದೇಶದ ಶಿಖರದ ಮೇಲೆ ನಮ್ಮ ಭಾರತ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಇವರ ಹೆಸರು ಗಿರೀಶ ಹುಲ್ಲೂರ . ಮೂಲತಃ ಹುಬ್ಬಳ್ಳಿ ನಿವಾಸಿಯಾದ ಇವರು , 75 ನೇ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾವನ್ನು ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಕಿಲಿಮಾಂಜರೋ ಪರ್ವತದ ಮೇಲೆ ಹಾರಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಹೆಮ್ಮೆ ತಂದಿದ್ದಾರೆ.

ಇನ್ನು ಗಿರೀಶ ಹುಲ್ಲೂರ ಅವರು ದೇಶ ಪ್ರೇಮದ ಜೊತೆಗೆ ಪರಿಸರ ಪ್ರೇಮಿಯೂ ಕೂಡ . ಇವರು ಬೈಕ್ ರೈಡ್ ಮೂಲಕ ಪಯಣ ಆರಂಭಿಸಿದ್ದು , ತಾಂಜಾನಿಯಾದ ಮಳೆ ಕಾಡಿನಿಂದ ಆಗಸ್ಟ್ 13 ರಿಂದ ಪರ್ವತಾರೋಹಣ ಆರಂಭ ಮಾಡಿದ್ದಾರೆ .

ಆಗಸ್ಟ್ 19 ರ ಬೆಳಿಗ್ಗೆ 7.45 ಕ್ಕೆ ಪರ್ವತದ ತುತ್ತ ತುದಿಗೆ ತಲುಪಿ ನಮ್ಮ ಭಾರತ ಮಾತೆಯ ಧ್ವಜವನ್ನು ಹಾರಾಡಿಸಿದ್ದಾರೆ . ಐವತ್ತರ ವಯಸ್ಸಿನಲ್ಲೂ ಈ ರೀತಿ ಸಾಧನೆ ಮಾಡಿದ ಗಿರೀಶ್ ಕುಟುಂಬ ಸಂತಸ ವ್ಯಕ್ತಪಡಿಸಿದ್ದಾರೆ .

ಹೀಗೆ ಪರ್ವತಾರೋಹಣ ಮಾಡಿ , ಮಕ್ಕಳನ್ನು ಗ್ಯಾಜೆಟ್ ಪ್ರಿಯರನ್ನಾಗಿ ಮಾಡುವ ಬದಲು , ಪರಿಸರದ ಬಗ್ಗೆ ಒಲವು ಬೆಳೆಸಿಕೊಳ್ಳಲು ಪಾಲಕರು ಪ್ರೇರೇಪಿಸಬೇಕೆಂದು ಸಂದೇಶ ಸಾರಿದ ಗಿರೀಶ್ ಅವರಿಗೆ ಹುಬ್ಬಳ್ಳಿ ಜನರು ಅಭಿನಂದನೆ ಸಲ್ಲಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

