Breaking News

ಬಾಲಿವುಡ್ ನಟನ ಮೇಲೆ ಆರೋಪ ಮಾಡಿದ ಸ್ವರಾ ! ಯಾರು ಗೊತ್ತಾ?


ಬಾಲಿವುಡ್ ನಲ್ಲಿ ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ತನಗೆ ಅನಿಸಿದ್ದನ್ನು ಹೇಳುವ ನಟಿಮಣಿಯರಲ್ಲಿ ಸ್ವರಾ ಭಾಸ್ಕರ್ ಕೂಡ ಒಬ್ಬಳು. ಯಾರು ಏನೆಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ವರಾ ಮಾತುಗಳನ್ನು ಆಡುತ್ತಾಳೆ.

ಸ್ವರಾ ನಟನೆ ಮಾಡುವ ಚಿತ್ರಗಳಿಗಿಂತ ಅವಳು ನೀಡುವ ಹೇಳಿಕೆಗಳೇ ಭಾರಿ ಹೆಡ್ಲೈನ್ ಗಿಟ್ಟಿಸುತ್ತವೆ. ಇದೀಗ ಮತ್ತೊಮ್ಮೆ ಗಂಭೀರ ಹೇಳಿಕೆ ನೀಡುವ ಮೂಲಕ ಸ್ವರಾ ಭಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ. ಆದರೆ, ಈ ಬಾರಿ ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಮೇಲೆ ಗಂಭೀರ ಆರೋಪ ಮಾಡಿರುವ ಸ್ವರಾ ಭಾಸ್ಕರ್ ‘ನಟ ನನ್ನ ಲವ್ ಲೈಫ್ ಆನ್ ಹಾಳುಮಾಡಿದ್ದಾನೆ’ ಎಂದು ಆರೋಪಿಸಿದ್ದಾಳೆ.

ಸ್ವರಾ ಮಾಡಿರುವ ಆರೋಪ ಏನು?
ಮಿಡ್‌ಡೇಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ ಭಾಸ್ಕರ್, ‘ನನ್ನ ಪ್ರೇಮ ಜೀವನವನ್ನು ಹಾಳುಮಾಡಲು ನಾನು ಆದಿತ್ಯ ಚೋಪ್ರಾ ಸರ್ ಮತ್ತು ಶಾರುಖ್ ಖಾನ್ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ. ನಾನು ಚಿಕ್ಕವಯಸ್ಸಿನಲ್ಲಿ ಶಾರುಖ್ ಅವರ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರವನ್ನು ನೋಡಿದ್ದೇನೆ ಮತ್ತು ಅಂದಿನಿಂದ ನಾನು ಶಾರುಕ್ ನಂತೆಯೇ ಕಾಣುವ ಆ ‘ರಾಜ್’ ಗಾಗಿ ಹುಡುಕಾಟ ನಡೆಸಿದೆ . ನಿಜ ಜೀವನದಲ್ಲಿ ಯಾವುದೇ ವ್ಯಕ್ತಿ ‘ರಾಜ್’ ನಂತೆ ಇರಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಹಲವು ವರ್ಷಗಳೇ ಬೇಕಾದವು. ಹೀಗಾಗಿ ಸಂಬಂಧಗಳಲ್ಲಿ ನಾನು ತುಂಬಾ ಒಳ್ಳೆಯವಳಾಗಿಲ್ಲ ಎಂಬುದು ನನಗೆ ಅನಿಸುವುದಿಲ್ಲ. ಒಂಟಿ ಜೀವನ ತುಂಬಾ ಕಷ್ಟದಿಂದ ಕೂಡಿರುತ್ತದೆ, ಆದರೆ, ಸಂಗಾತಿಯನ್ನು ಹುಡುಕುವುದು ಕಸವನ್ನು ಜಾಲಾಡಿದಂತಿದೆ’ ಎಂದು ಸ್ವರಾ ಹೇಳಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *