Breaking News

ಶಾಲಾ ಆವರಣದಲ್ಲಿ ದುಶ್ಚಟ- ಬುದ್ದಿ ಹೇಳಿದವರ ಮೇಲೆಯೇ ಪುಂಡರಿಂದ ಹಲ್ಲೆಗೆ ಯತ್ನ

ಹುಬ್ಬಳ್ಳಿ : ಖಾಸಗಿ ಶಾಲೆಯ ಮೈದಾನದಲ್ಲಿ ದುಶ್ಚಟ ಮಾಡಬೇಡಿ ಅಂತ ಬುದ್ಧಿ ಹೇಳಿದಕ್ಕೆ ಶಿಕ್ಷಕರ ಮೇಲೆ ನಶೆಯಲ್ಲಿದ್ದ ಯುವಕರು ಹಲ್ಲೆಗೆ ಯತ್ನಿಸಿದ ಘಟನೆ ನಗರದ ಹಳೇ ಹುಬ್ಬಳ್ಳಿಯ ವಿವೇಕಾನಂದ ಸ್ಕೂಲ್‌ನಲ್ಲಿ ನಡೆದಿದೆ.

ವಿವೇಕಾನಂದ ಶಾಲೆಯ ಮೈದಾನದಲ್ಲಿ ಕೆಲವು ಯುವಕರು ಹಲವು ದಿನಗಳಿಂದ ದುಶ್ಚಟವನ್ನು ಮಾಡುತ್ತಿದ್ದರು .

ಈ ಹಿನ್ನೆಲೆಯಲ್ಲಿ ಶಾಲೆಯ ಸೆಕ್ಯೂರಿಟಿ ಗಾರ್ಡ್ ಹಾಗೂ ಶಿಕ್ಷಕರು ಬುದ್ಧಿವಾದ ಹೇಳಿದಕ್ಕೆ ಅವರ ಮೇಲೆಯೇ ನಶೆಯಲ್ಲಿದ್ದ ಯುವಕರು ಚೇರ್ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ .

ಆಗ ಶಾಲಾ ಸಿಬ್ಬಂದಿ ಈ ವಿಡಿಯೋ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ .

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದ ಹಾಗೆ ಅಲರ್ಟ್ ಆದ ಹಳೇ ಹುಬ್ಬಳ್ಳಿಯ ಪೊಲೀಸರು ಕಾರ್ತಿಕ ಹಾಗೂ ಅಜಯ ಎಂಬ ಯುವಕರನ್ನು ವಶಕ್ಕೆ ಪಡೆದು ಸುಮೋಟೋ ಕೇಸ್ ದಾಖಲು ಮಾಡಿಕೊಂಡಿದ್ದಾರೆ .

ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *