Breaking News

ಅತೀ ಹೆಚ್ಚು ಜನ ವಿಕ್ಷೀಸಿದ ರಾಣಿ ಎಲಿಜಬೆತ್ ಅಂತ್ಯಕ್ರಿಯೆಯ ಪ್ರಸಾರ

ವಯೋ ಸಹಜ ಕಾಯಿಲೆಯಲ್ಲಿ ಬಳಲುತ್ತಿದ್ದ ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ನಡೆಸಿದ ರಾಣಿ ಎಂದೇ ಖ್ಯಾತಿ ಘಳಿಸಿದ ರಾಣಿ ಎಲಿಜಬೆತ್ II ನಿಧನರಾಗಿದ್ದಾರೆ. ರಾಣಿ ಎಲಿಜಬೆತ್ ಅಂತ್ಯಕ್ರಿಯೆಯ ಪ್ರಸಾರವನ್ನು ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಮಂದಿ ನೋಡಿದ್ದಾರೆ ಎನ್ನಲಾಗುತ್ತಿದೆ.

ಸೆಪ್ಟೆಂಬರ್ 19ರಂದು ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗಿತ್ತು. ಅಂದಾಜಿನ ಪ್ರಕಾರ ಸುಮಾರು 420 ಕೋಟಿ ಜನರು ಅಂತ್ಯಕ್ರಿಯೆ ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆ 1997ರಲ್ಲಿ ನಿಧನರಾದ ರಾಜಕುಮಾರಿ ಡಯಾನಾ ಅವರ ಅಂತ್ಯಕ್ರಿಯೆಯನ್ನು 2.5 ಬಿಲಿಯನ್ ಮಂದಿ ವೀಕ್ಷಿಸಿದ್ದರು ಎಂದು  ಮಾಡಿತ್ತು. ಇದೀಗ ಮೃತಪಟ್ಟಿರುವ ರಾಣಿ ಎಲಿಜಬೆತ್ II ಅಂತ್ಯಕ್ರಿಯೆಯನ್ನು ಬರೋಬ್ಬರಿ 410 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ನ್ಯೂಸ್​ವೀಕ್ ವರದಿ ಮಾಡಿದೆ.1952ರಲ್ಲಿ ಬ್ರಿಟನ್ ರಾಣಿಯಾಗಿ ಅಧಿಕಾರ ಸ್ವೀಕರಿಸಿದ ರಾಣಿ ಎಲಿಜಬೆತ್ II 70 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ್ದರು.. ಬ್ರಿಟನ್ ಅರಸೊತ್ತಿಗೆಯಲ್ಲಿ ಅತೀ ಹೆಚ್ಚು ಕಾಲ ಇದ್ದ ದಾಖಲೆ ಎಲಿಜಬೆತ್ II ಅವರದಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *