ಹುಬ್ಬಳ್ಳಿ: ಹೌದು ಹುಬ್ಬಳ್ಳಿಯಲ್ಲಿ ಒಂದ್ ಇಲ್ಲಾ ಒಂದು ಕ್ಷುಲ್ಲಕ ಕಾರಣಕ್ಕೆ ಚಾಕು ತಲವಾರಗಳಿಂದ ಹಲ್ಲೆ ಮಾಡುವುದು ಸರ್ವೇ ಸಾಮಾನ್ಯ ವಾಗಿದೆ. ಪೊಲೀಸರು ಎಷ್ಟೆ ಬಿಗಿ ಮಾಡಿದರು ಈ ಪುಡಿ ರೌಡಿಗಳು ತಮ್ಮ ಬಾಲಾ ಬಿಚ್ಚುತ್ತಲೆ ಇದ್ದಾರೆ.

ಹಾಡು ಹಗಲೇ ಇಬ್ಬರ ನಡುವೆ ಹಣದ ವಿಷಯಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕಸಬಾಪೇಟೆ ಠಾಣಾ ವ್ಯಾಪ್ತಿಯ ಕರ್ಜಗಿ ಓಣಿ ಯಲ್ಲಿ ನಡೆದಿದೆ. ಇರ್ಫಾನ್ ಬೇಪಾರಿ ಹಾಗೂ ಮೊಹಮ್ಮದ್ ಶಪಿ ಅನ್ನೋರ ನಡುವೆ ಈ ಒಂದು ಜಗಳ ನಡೆದಿದೆ. 2160 ರೂ ವಿಷಯಕ್ಕೆ ಇರ್ಫಾನ್ ಬೇಪಾರಿಯು ಮೊಹಮ್ಮದ್ ಶಪಿ ಮೇಲೆ ಚಾಕುವಿನಿಂದ ಹೊಟ್ಟೆ ಬಾಗಕ್ಕೆ ಇರಿದಿದ್ದಾನೆ.

ಮೊಹಮ್ಮದ್ ಶಪಿ ಹಾಗೂ ಇರ್ಫಾನ್ ಬೇಪಾರಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ತೆ ಪಡೆದುಕೊಳ್ಳುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಕಾಸಬಾಪೇಟೆ ಠಾಣಾ ಇನ್ಸ್ಪೆಕ್ಟರ್ ಏ ಎಂ ಬನ್ನಿ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.