ಹುಬ್ಬಳ್ಳಿ: ಪುಡಿ ರೌಡಿಗಳ ಗುಂಪೊಂದು ವ್ಯಕ್ತಿ ಓರ್ವನಿಗೆ ಚಾಕುವಿನಿಂದ ಮನಸೋಇಚ್ಛೆ ಹಲ್ಲೆ ಮಾಡಿದ ಘಟನೆ ನಗರದ ಇಸ್ಲಾಂಪೂರ ರಸ್ತೆಯ ಮಸೀದಿ ಹತ್ತಿರದ ಸಿದೀಕ್ ಕಿನಾಲ್ ಬಳಿ ನಡೆದಿದೆ.ಹಳೇ ದ್ವೇಷದ ಹಿನ್ನಲೆಯಲ್ಲಿ ಉಮರೆಜ್ ಹಾಗೂ ಅವೇಜುಲ್ಲಾ ಎಂಬ ಆರೋಪಿಗಳ ಗುಂಪೊಂದು ಬರ್ಬರವಾಗಿ ಚಾಕು ಇರಿತ ಮಾಡಿ ಪರಾರಿಯಾಗಿದ್ದಾರೆ.ತೀವ್ರವಾಗಿ ಗಾಯಗೊಂಡ ಖಾದರಸಾಬ ಔದರಿಯನ್ನು (26)ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ್ದಾನೆ.ಈ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ…

bigtvnews | Hubli Dharwad News | Kannada News | Karnataka News Hubli News | News In Hubli | Local news

