Breaking News

ಅದ್ದೂರಿಯಿಂದ ನಡೆದ ಜಂಬೂ ಸವಾರಿ : ಅಂಬಾರಿ ಹೊತ್ತು ನಡೆದ ಆನೆಗಳು

ಧಾರವಾಡ: ದಸರಾ ಹಬ್ಬದ ಅಂಗವಾಗಿ ಧಾರವಾಡದಲ್ಲಿ ಅದ್ದೂರಿಯಿಂದ ಜಂಬೂ ಸವಾರಿ ಉತ್ಸವ ನೆರವೇರಿತು.

ಪ್ರತಿವರ್ಷ ಮೂಲ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ಈ ಜಂಬೂ ಸವಾರಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಕಳೆದ ಕೊರೊನಾ ಹಿನ್ನೆಲೆಯಲ್ಲಿ ಕೃತಕ ಆನೆ ಮೇಲೆ ಅಂಬಾರಿಯನ್ನಿಟ್ಟು ಮೆರವಣಿಗೆ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷ ಎರಡು ಜೀವಂತ ಆನೆಗಳ ಮೂಲಕ ಜಂಬೂ ಸವಾರಿ ಉತ್ಸವ ಅದ್ದೂರಿಯಿಂದ ನೆರವೇರಿದೆ.

ಧಾರವಾಡದ ಗಾಂಧಿನಗರ ಈಶ್ವರ ದೇವಸ್ಥಾನದಲ್ಲಿ ಜಂಬೂ ಸವಾರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಒಂದು ಆನೆ ಮೇಲೆ ಬಂಡೆಮ್ಮ ದೇವಿಯ ಮೂರ್ತಿ ಇನ್ನೊಂದು ಆನೆಯ ಮೇಲೆ ದುರ್ಗಾದೇವಿ ಮೂರ್ತಿಯನ್ನಿಟ್ಟು ಮೆರವಣಿಗೆ ಮಾಡಲಾಯಿತು. ಅಂಬಾರಿ ಹೊತ್ತ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಗಮನಸೆಳೆದವು. ಮೆರವಣಿಗೆಯ ಜೊತೆಗೆ ಸಾರೋಟಿನಲ್ಲಿ ಕೋಡಿಮಠದ ಸ್ವಾಮೀಜಿಗಳ ಮೆರವಣಿಗೆಯನ್ನೂ ಮಾಡಲಾಯಿತು.

ಇನ್ನು ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಗೊಂಬೆ ಕುಣಿತದವರು, ಡೊಳ್ಳಿನ ಮೇಳದವರು ಸೇರಿದಂತೆ ಅನೇಕ ಕಲಾ ತಂಡದವರು ಪಾಲ್ಗೊಂಡು ಜಂಬೂ ಸವಾರಿಯ ಮೆರಗು ಹೆಚ್ಚಿಸಿದರು. ಇನ್ನು ಧಾರವಾಡ ಗಾಂಧಿನಗರದಿಂದ ಆರಂಭವಾದ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಮನಸೆಳೆಯಿತು

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *