
ಹುಬ್ಬಳ್ಳಿಯ ಗಾಮನಗಟ್ಟಿ ನಿವಾಸಿ ಕಲ್ಲನಗೌಡ ಹಾಗೂ ಆತನ ತಮ್ಮ ಬಸವನಗೌಡನ ನಡುವೆ ಹಲವು ದಿನಗಳಿಂದ ಆಸ್ತಿ ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು.
ಇದೆ ವಿಚಾರಕ್ಕೆ ನಿನ್ನೆ ಗುರುವಾರದಂದು ತಮ್ಮನಾದ ಬಸವನಗೌಡ ಏಕಾಏಕಿ ಕಲ್ಲನಗೌಡ ಮನೆಗೆ ನುಗ್ಗಿ ಕಣ್ಣಿಗೆ ಕಾರದ ಪುಡಿ ಏರಚಿ ಚಾಕುವಿನಿಂದ ಮನಬಂದಂತೆ ದಾಳಿ ಮಾಡಿದ್ದಾನೆ. ಕಲ್ಲನಗೌಡನ ದ್ವನಿ ಕೇಳಿ ಓಡಿ ಬಂದ ಆತನ ಹೆಂಡತಿ ಮೇಲೆ ಕೂಡ ಬಸವನಗೌಡ ಹಲ್ಲೆ ಮಾಡಿದ್ದಾನೆ, ಆಕೆಯು ಓಡಿ ಹೋಗಿ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ.

ತೀವ್ರವಾಗಿ ರಕ್ತಸ್ರಾವದಿಂದ ಬಿದ್ದಿದ್ದ ಕಲ್ಲನಗೌಡ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸಧ್ಯ ಆತನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಎಸಿಪಿ ವಿನೋದ ಮುಕ್ತದಾರ ಹಾಗೂ ನವನಗರ ಇನ್ಸ್ಪೆಕ್ಟರ್ ಬಾಲು ಮಂತುರ್ ಆಸ್ಪತ್ರೆಗೆ ಭೇಟಿ ನೀಡಿ ಕಲ್ಲನಗೌಡನ ಪತ್ನಿಯಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ನವನಗರ ಪೊಲೀಸರು ಬಸವನಗೌಡನ ಪತ್ತೆಗೆ ಬಲೆ ಬೀಸಿದ್ದಾರೆ.