ಕಾಂತಾರ ಸದ್ಯ ಭಾರತೀಯ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಹೆಸರು. ಕರಾವಳಿಯ ದೈವಾರಾಧನೆ, ಕಲೆ ಸಂಸ್ಕೃತಿಯನ್ನೇ ಇಟ್ಟುಕೊಂಡು ನಟ ನಿರ್ದೇಶಕ ವೃಷಭ್ ಶೆಟ್ಟಿ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಕಾಂತಾರ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ. ಒಂದೆಡೆ ಕೆಜಿಎಫ್ ದಾಖಲೆಯನ್ನು ಅಳಿಸಿರುವ ಕಾಂತಾರ, ಇದೀಗ ಹಿಂದಿ ಅವತರಿಣಿಕೆ ಕೂಡ ಬಾಕ್ಸ್ ಆಫೀಸ್ ಕೆಲೆಕ್ಷನ್ಸ್ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಭಾರತೀಯ ಚಿತ್ರರಂಗದಲ್ಲಿಯೇ ಕಾಂತಾರ ಹೊಸ ಇತಿಹಾಸವನ್ನು ಸೃಷ್ಟಿಸುವತ್ತ ಮುನ್ನಡೆಯುತ್ತಿದೆ. ಕಳೆದ ಎರಡು ವಾರಗಳಿಂದಲೂ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನವನ್ನು ಕಾಣುತ್ತಿದೆ. ಕರಾವಳಿ ಮಂದಿಯೂ ಕಾಂತಾರ ನೋಡಲು ಮುಗಿಬಿದ್ದಿದ್ದಾರೆ. ಇನ್ನೊಂದೆಡೆಯಲ್ಲಿ ಅಕ್ಟೋಬರ್ 14 ರಂದು ಹಿಂದಿ ಭಾಷೆಗೆ ಡಬ್ ಬಿಡುಗಡೆ ಕಂಡಿದೆ. ಆರಂಭದ ದಿನವೇ 1.27 ಕೋಟಿ ಕಲೆಕ್ಸನ್ ಮಾಡಿದ್ದ ಕಾಂತಾರ ನಂತರದ ದಿನಗಳಲ್ಲಿ ಶೇಕಡಾ 130-140 ರಷ್ಟು ಏರಿಕೆಯನ್ನು ಕಾಣುತ್ತಿದೆ.ಇತ್ತೀಚೆಗೆ ಬಾಲಿವುಡ್ ನಲ್ಲಿ ತೆರೆಕಂಡ ಡಾಕ್ಟರ್ ಜಿ ಮತ್ತು ಕೋಡ್ ನೇಮ್ ತಿರಂಗಾ ಸಿನಿಮಾಗಳಿಗಿಂತಲೂ ಅಧಿಕ ಕೆಲಕ್ಷನ್ಸ್ ಮಾಡುತ್ತಿದೆ.
ಕಾಂತಾರ ಸಿನಿಮಾ ಮಹಾರಾಷ್ಟ್ರದಲ್ಲಿ ಹೌಸ್ ಪುಲ್ ಪ್ರದರ್ಶನವನ್ನು ಕಾಣುತ್ತಿದೆ. ಎರಡನೇ ದಿನ 2.25-2.50 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ಸ್ ಕಂಡಿದೆ. ಎರಡು ದಿನದಲ್ಲಿ ಒಟ್ಟಾರೆ ಸಿನಿಮಾ 3.25-3.50 ಕೋಟಿ ರೂಪಾಯಿ ಸಂಗ್ರಹ ಮಾಡಿದೆ.ಕಾಂತಾರ ಹಿಂದಿ ಆವೃತ್ತಿಗೆ ಪರಿಣಿತಿ ಚೋಪ್ರಾ ಅವರ ಕೋಡ್ ನೇಮ್ ತಿರಂಗಕ್ಕೆ ಹೋಲಿಸಿದರೆ ಉತ್ತಮ ರೆಸ್ಪಾನ್ಸ್ ಲಭ್ಯವಾಗಿದೆ. ಕೋಡ್ ನೇಮ್ ತಿರಂಗ ಮೊದಲ ದಿನ 15 ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಸದ್ಯ ಕಾಂತಾರ ಸಿನಿಮಾ ಭಾರತದಲ್ಲಿ ಒಟ್ಟು 1200 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ. ಮಹಾರಾಷ್ಟ್ರ ಮಾತ್ರವಲ್ಲದೇ ದೆಹಲಿ, ಪಂಚಾಬ್, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿಯೂ ಸಿನಿಮಾ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

