Breaking News

ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಮಾನತಿಗಾಗಿ ಆಗ್ರಹಿಸಿ ಪ್ರತಿಭಟನೆ

ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಸಾರ್ವಜನಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಮಾನತಿಗಾಗಿ ಆಗ್ರಹಿಸಿ ಬಹುಜನ ಅಂಬೇಡ್ಕರ್ ಸಂಘದ ವತಿಯಿಂದ ಶಹಾಪುರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
2018 -19 ನೆ ಸಾಲಿನ ಸೇರ್ಪಡೆ ಮತ್ತು ಲೆಕ್ಕ ಶೀರ್ಷಿಕೆ ಕ್ರಿಯೆ ಯೋಜನೆಯಲ್ಲಿ ತಾಲೂಕಿನ ಚಟ್ನಲ್ಲಿ, ಮದ್ದರಕಿ, ನಗನಟಗಿ, ತುಮಕುರು, ಹತ್ತಿಗೂಡುರೂ, ಹೀಗೆ ಹಲವಾರು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕಿಟಕಿ,ಬಾಗಿಲು,ನೆಲಸಮ ಹೀಗೆ ಹಲವಾರು ಕಾಮಗಾರಿಗಳಲ್ಲಿ 20 ಲಕ್ಷ ರೂಪಾಯಿ ಮೊತ್ತದ ಬಾರಿ ಗೋಲ್ಮಾಲ್ ನಡೆದಿದೆ ಎಲ್ಲ ದಾಖಲೆಗಳನ್ನು RTI ಮೂಲಕ ತೆಗೆದುಕೊಂಡು ಮಾಧ್ಯಮಗಳ ಮೂಲಕ ಬಹುಜನ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ರಾಯಪ್ಪ.ಎಸ್.ಸಾಲಿಮಣಿಯವರು ಆರೋಪಿಸಿದ್ದರು.
ಈ ಆರೋಪ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿಯವರು ರಾಯಪ್ಪನವರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ . ಆದ ಕಾರಣ ರಾಯಪ್ಪ ಸಾಲಿಮನಿಯವರು ಕ್ಷೇತ್ರ ಶಿಕ್ಷಣಾಧಿಕಾರಿಯ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ FIR (U/s -506) ಆದ ಕಾರಣ ಇಂತ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಬಹುಜನ ಅಂಬೇಡ್ಕರ್ ಸಂಘದ ವತಿಯಿಂದ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಹಸೀಲ್ದಾರಿಗೆ FIR ಕಾಪಿ ಮತ್ತು ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಫೋನ್ ಮಾಡಿ ಬೆದರಿಕೆ ಹಾಕಿದ ಕಾಲ್ ರೆಕಾರ್ಡ್ CD ಯನ್ನು ತಹಶೀಲ್ದಾರಿಗೆ ನೀಡಿದ್ದಾರೆ
ಈ ಕುರಿತು ತಹಶೀಲ್ದಾರ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *