ಮಹದೇವಪುರ: ವಿಧಾನಸಭಾ ಕ್ಷೇತ್ರದ ಗುಂಜೂರಿನಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ 535 ನೇ ಜಯಂತೋತ್ಸ ವವನ್ನು ಶ್ರೀ ಕನಕ ಸೇವಾ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಗುಂಜೂರಿನ ಗೋಕುಲ್ ಸರ್ಕಲ್ ನಲ್ಲಿ ಥರ್ಮಕೋಲ್ ನಿಂದ ದೇವಾಲಯ ಸೆಟ್ ನಿರ್ಮಿಸಿ, ಅದರಲ್ಲಿ ಕನಕದಾಸರ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು.ನಂತರ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಶಿಕ್ಷಕರು ಹಾಗು ಪೌರಕರ್ಮಿಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಕನಕದಾಸರ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಕೇರಳದ ವಾದ್ಯ ಹಾಗೂ ಕೀಲು ಕುದುರೆ ತಂಡಗಳ ಪ್ರದರ್ಶನದೊಂದಿಗೆ ಗುಂಜೂರಿನ ರಾಜಬೀದಿಗಳಲ್ಲಿ ಕನಕದಾಸರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಐದು ವರ್ಷಗಳಿಂದ ಗುಂಜೂರು ಗ್ರಾಮದಲ್ಲಿ ಕನಕದಾಸರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದ್ದು, ಮುಂದೆಯೂ ಕೂಡಾ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸ್ಥಳೀಯ ಶ್ರೀನಾಥ್ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

