Breaking News

ಭಾರತ್‌ ಜೋಡೊ ಯಾತ್ರೆಯಲ್ಲಿ ಭಾರತದ ರಾಷ್ಟ್ರಗೀತೆ ಬದಲಿಗೆ ನೇಪಾಳದ ರಾಷ್ಟ್ರಗೀತೆ


ಮುಂಬೈ: ಭಾರತ್‌ ಜೋಡೊ ಯಾತ್ರೆಯಲ್ಲಿ ಭಾರತದ ರಾಷ್ಟ್ರಗೀತೆ ಬದಲಿಗೆ ನೇಪಾಳದ ರಾಷ್ಟ್ರಗೀತೆ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅನ್ನು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.

ಮಹಾರಾಷ್ಟ್ರದ ವಾಶಿಮ್‌ನಲ್ಲಿ ರಾಹುಲ್‌ ಗಾಂಧಿ ಅವರ ಭಾಷಣ ಇತ್ತು.ಭಾಷಣ ಮುಗಿದ ಬಳಿಕ, ರಾಹುಲ್‌ ಅವರು ‘ಈಗ ರಾಷ್ಟ್ರಗೀತೆ ಹಾಕಲಿದ್ದಾರೆ’ ಎಂದು ವೇದಿಕೆಯಲ್ಲಿ ನಿಂತುಕೊಂಡರು. ಆದರೆ, ಭಾರತದ ರಾಷ್ಟ್ರಗೀತೆ ಬದಲಿಗೆ, ನೇಪಾಳದ ರಾಷ್ಟ್ರಗೀತೆ ಕೇಳಿಬಂದಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು ಎಂದು ವರದಿ ಮಾಡಿದೆ.

ವೇದಿಕೆಯಲ್ಲಿ ನಿಂತಿದ್ದ ರಾಹುಲ್‌ ಸೇರಿದಂತೆ ಹಲವು ಮುಖಂಡರು ಒಂದು ಕ್ಷಣ ಅವಕ್ಕಾದರು. ಮಹಾರಾಷ್ಟ್ರದ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರು ಮೊಬೈಲ್‌ನಲ್ಲಿ ಹಾಡು ಹಾಕಿದ ವ್ಯಕ್ತಿಯನ್ನು ಕರೆದು, ಹಾಡನ್ನು ನಿಲ್ಲಿಸುವಂತೆ ಹೇಳಿದರು. ನಂತರ ಭಾರತದ ರಾಷ್ಟ್ರಗೀತೆಯನ್ನು ಹಾಕಲಾಯಿತು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *