ಬೀಚಿಂಗ್: ಚೀನಾದ ಹಲವು ನಗರಗಳಲ್ಲಿ ಕೊವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಿದೆ.
ಭಾನುವಾರ ನಿನ್ನೆ ಒಂದೇ ದಿನ 40,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಕೊವಿಡ್ ನಿಯಂತ್ರಣಕ್ಕಾಗಿ ಅಲ್ಲಿನ ಸರ್ಕಾರವು ಘೋಷಿಸುತ್ತಿರುವ ಲಾಕ್ಡೌನ್ ಆದೇಶಗಳು ಜನರನ್ನು ಸಿಟ್ಟಿಗೆಬ್ಬಿಸಿದೆ.
ಈಗಾಗಲೇ ಸಾಕಷ್ಟು ಕಷ್ಟನಷ್ಟ ಅನುಭವಿಸಿರುವ ಜನರು ಇನ್ನೊಂದು ಸುತ್ತಿನ ಕ್ವಾರಂಟೈನ್, ಸಾಮೂಹಿಕ ತಪಾಸಣೆಗಳು ಹಾಗೂ ಸುದೀರ್ಘ ನಿರ್ಬಂಧ ಆದೇಶಗಳನ್ನು ಸಹಿಸುವ ಸ್ಥಿತಿಯಲ್ಲಿ ಇಲ್ಲ. ಜನರ ಆಕ್ರೋಶವು ಪ್ರತಿಭಟನೆಗಳಾಗಿ ಜನಾಕ್ರೋಶವು ಸ್ಫೋಟಗೊಳ್ಳುತ್ತಿರುವುದು ಅಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆಯಂತೆ.! ಸಾವು ನೂವುಗಳ ಬಗ್ಗೆ ನಿಖರವಾದ ವರದಿ ಆಗಿಲ್ಲ
bigtvnews | Hubli Dharwad News | Kannada News | Karnataka News Hubli News | News In Hubli | Local news

