ನಳೀನ ಕುಮಾರ್ ಕಟೀಲು ರಾಜೀನಾಮೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಇಂದು ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಪ್ರತಿಕ್ರೀಯೆ ನೀಡಿದ್ದಾರೆ.ಅದು ಅವರ ಪಕ್ಷದ ಆಂತರಿಕ ವಿಚಾರ.ಇದಕ್ಕೆ ನಾನ ಏನೂ ಮಾತಾಡಲಿ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಬಿಜೆಪಿ ಪಕ್ಷ ಗೊಂದಲದಲ್ಲಿದೆ ಹಾಗಾಗಿ ಅವರೇ ಸ್ಪಷ್ಟ ಪಡಿಸಬೇಕಾಗಿದೆ.ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಹಿಂದೆ ಹೇಳಿರೋದು ಎಲ್ಲವೂ ನಿಜ ವಾಗುತ್ತಿದೆ.ಸೋಲಿಗೆ ಕಾರಣ ಯಾರೂ ಅನ್ನೋದನ್ನ ಅವರೇ ಸ್ಪಷ್ಟ ಪಡಿಸಬೇಕಾಗಿದೆ.ಸೋಲಿಗೆ ಹಲವಾರ ಕಾರಣ ಇದೆ..ಸ್ವಯಂಕೃತ ಅಪರಾಧವೂ ಸೋಲಿಗೆ ಕಾರಣ.ಬಿಜೆಪಿ ತಳಪಾಯವೇ ಕುಸಿದು ಹೋಗುತ್ತಿದೆ.ಅದನ್ನು ಗಟ್ಟಿ ಮಾಡೋ ಕೆಲಸ ಆಗ್ತಿಲ್ಲ.ಬಿಜೆಪಿಯ ಅಡಿಪಾಯವೇ ಡಿಸ್ಟರ್ಬ್ ಆಗಿ ಕುಸಿದು ಹೋಗುತ್ತಿದೆ.ಇದು ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರತ್ತೆ.ಲೋಕಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸತ್ತೆ. ಬಿಜೆಪಿ ಪಕ್ಷದ್ದು ಕೇವಲ ಗೋಡೆ ಬರಹ. ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯತರಿಗೆ ಕೊಡಬೇಕ ಅನ್ನೋ ವಿಚಾರವಾಗಿ ಮಾತನಾಡಿದ ಜಗದೀಶ ಶಟ್ಟರ್ ಅವರು ನನ್ನ ಹಾಗೂ ಬಿಜೆಪಿಯೊಂದಿಗೆ ಸಂಭಂದ ಮುಗಿದು ಹೋಗಿದೆ.ನಾನ ಏಕೆ ಅದನ್ನು ಹೇಳಲಿ. ರಾಜ್ಯ ಬಿಜೆಪಿ ಬಹಳ ಗೊಂದಲದಲ್ಲಿದೆ. ವಿಪಕ್ಷ ನಾಯಕ ಯಾರು ಅನ್ನೋದ ಗೊತ್ತಿಲ್ಲ. ಪ್ರತಾಪ್ ಸಿಂಹ ಒಂದು ತರಹ ಮಾತಾಡ್ತಾರೆ. ಏನ್ ಮಾಡೋದ ಎಲ್ಲ ಮಾಡಿದ್ದಾರೆ. ಪಕ್ಷ ರಿಪೇರಿ ಮಾಡೋಕೆ ಏನು ಉಳದಿಲ್ಲ ಎಂದರು. ಮುನೇನಕೊಪ್ಪ ನಮ್ಮ ಜೊತೆ ಏನೂ ಚರ್ಚೆ ಮಾಡಿಲ್ಲ. ಅವರ ಮನಸ್ಸಿನಲ್ಲದೆ ಏನೂ ಗೊತ್ತಿಲ್ಲ. ಅವರು ಪಕ್ಷಕ್ಕೆ ಬರೋದು ಚರ್ಚೆ ಆಗಿಲ್ಲ. ನಾನು ಅವರೊಂದಿಗೆ ಮಾತಾಡಿಲ್ಲ. ಅವರನ್ನ ಸ್ವಾಗತ ಮಾಡೋದ ಬಿಡೋದು ಏನಿಲ್ಲ. ಅವರ ಪಕ್ಷಕ್ಕೆ ಬರೋದರ ಬಗ್ಗೆ ಚರ್ಚೆನೆ ಇಲ್ಲ. ಎಂದು ಇಂದು ಹುಬ್ಬಳ್ಳಿಯಲ್ಲಿ ತಿಳಿಸಿದರು.

bigtvnews | Hubli Dharwad News | Kannada News | Karnataka News Hubli News | News In Hubli | Local news




