ಉತ್ತರ ಅಫ್ಘಾನಿಸ್ತಾನ :ಇಲ್ಲಿ ಧಾರ್ಮಿಕ ಶಾಲೆಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಸಮಂಗನ್ ಪ್ರಾಂತ್ಯದ ರಾಜಧಾನಿ ಅಯ್ಬಕ್ನಲ್ಲಿರುವ ಮದರಸಾದಲ್ಲಿ ಪ್ರಾರ್ಥನೆ ಸಮಯದಲ್ಲಿಯೇ ಸ್ಫೋಟ ಸಂಭವಿಸಿದೆ.ಶಾಲೆಗೆ ಕಳುಹಿಸಿದ್ದ ಮಕ್ಕಳು ಮರಳಿ ಬಾರದೆ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ತಾಲಿಬಾನ್ ಮಾಧ್ಯಮಗಳಿಗೆ ವಿತರಿಸಿ ವಿಡಿಯೋದಲ್ಲಿ ಸ್ಫೋಟದ ಸ್ಥಳ, ಭಗ್ನಾವೇಶಗಳು, ಚಾಪೆ, ರಕ್ತದ ಕಲೆಗಳು, ಚಪ್ಪಲಿಗಳನ್ನು ಕಾಣಬಹುದಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನಫಿ ಟಕೋರ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

