ದಾವಣಗೆರೆ: ಜಲ್ಲಿಕಲ್ಲು ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹೊನ್ನಾಯಕನಹಳ್ಳಿಯ ನಿವಾಸಿ, ಚಾಲಕ ಶಿವರಾಜ್(25), ಹೆಬ್ಬಾಳದ ನಿವಾಸಿ, ಕ್ಲೀನರ್ ತೇಜಸ್ ಕುಮಾರ್(32) ಮೃತ ದುರ್ದೈವಿಗಳು. ಮೃತರು ಕಳೆದ ಎರಡು ವರ್ಷಗಳಿಂದ ಕ್ವಾರೆಗಳಿಂದ ಜಲ್ಲಿ ಕಲ್ಲು ಸಾಗಿಸುತ್ತಿದ್ದರು. ಹೀಗೆ ಇಂದು (ಡಿ.20) ಜಲ್ಲಿ ಕಲ್ಲು ಸಾಗಿಸುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

