Breaking News

ತಾನೇ ರಕ್ಷಿಸಿದ ನಾಯಿ ಮರಿ ಕಚ್ಚಿ ರೇಬಿಸ್ ನಿಂದ ಕಬಡ್ಡಿ ಆಟಗಾರ ಸಾವು!

ಆಟಗಾರನೊಬ್ಬ ನಾಯಿ ಕಡಿತದಿಂದ ‘ರೇಬೀಸ್’ ಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆಟಗಾರನ ನಿರ್ಲಕ್ಷ್ಯದಿಂದಾಗಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಮೂರು ತಿಂಗಳ ಹಿಂದೆ, ನಾಯಿಯೊಂದು ಆಟಗಾರನಿಗೆ ಕಚ್ಚಿತ್ತು. ನಾಯಿ ಕಡಿತವನ್ನು ಸಣ್ಣ ಗಾಯವೆಂದು ಪರಿಗಣಿಸಿ ಬ್ರಿಜೇಶ್ ಸೋಲಂಕಿ ನಿರ್ಲಕ್ಷಿಸಿದ್ದರು.ಬ್ರಿಜೇಶ್ ಇದ್ದಕ್ಕಿದ್ದಂತೆ ನೀರನ್ನು ನೋಡಿ ಹೆದರಲು ಪ್ರಾರಂಭಿಸಿದರು. ಕ್ರಮೇಣ ಅವರಲ್ಲಿ ರೇಬೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು ಎಂದು ಬ್ರಿಜೇಶ್ ಅವರ ಸಹೋದರ ಸಂದೀಪ್ ಕುಮಾರ್ ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಅವರು ನೀರನ್ನು ನೋಡಿ ಹೆದರಲು ಪ್ರಾರಂಭಿಸಿದರು. ದೆಹಲಿ ಸೇರಿದಂತೆ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಸಿಕ್ಕಿಲ್ಲ ಎಂದು ಆಟಗಾರನ ಸಹೋದರ ಹೇಳಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *