Breaking News

ತೆರುವು ಕಾರ್ಯಾಚರಣೆಯಲ್ಲಿ ಸಹ ತಾರತಮ್ಯ- ಹಿರಿಯ ವಕೀಲ

ಹುಬ್ಬಳ್ಳಿ : ಇಂದು ರಾಜ್ಯ ಸರ್ಕಾರ ಹಾಗೂ ಬಿಆರಟಿಎಸ್ ಅವರು ದರ್ಗಾ ತೆರವು ಮಾಡಿದ್ದಾರೆ. ಇಲ್ಲಿನ ದರ್ಗಾಕ್ಕೆ ಮಾತ್ರ ೪೪ ಮೀಟರ್ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಬೇರೆ ಸ್ಥಳಗಳಲ್ಲಿ ೩೫ ಮೀಟರ್ ಮಾತ್ರ ಇದೆ. ದರ್ಗಾ ಮುಂಭಾಗದಲ್ಲಿ ಶಾಸಕ ಬೆಲ್ಲದ ಅವರ ಜಾಗವಿದೆ. ಈ ದರ್ಗಾ ಉಳಿಸಿ ಬೆಲ್ಲದ ಅವರ ಜಾಗವನ್ನು ಯಾಕೆ ಒತ್ತುವರಿ ಮಾಡಲಿಲ್ಲ. ರಾಜಕೀಯ ಪ್ರಯತ್ನದಿಂದ ಅವರ ಜಾಗವನ್ನು ಬಿಟ್ಟು ನಮ್ಮ ದರ್ಗಾವನ್ನು ತೆರವು ಮಾಡಿದ್ದಾರೆ ಎಂದು ಹಿರಿಯ ವಕೀಲ ಎಂ.ಆರ್ ಮುಲ್ಲಾ ಗಂಭೀರ ಆರೋಪ ಮಾಡಿದರು.

ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು, ಹುಬ್ಬಳ್ಳಿಯಿಂದ ಧಾರವಾಡವರೆಗೆ ಬಿಆರಟಿಎಸ್ ರಸ್ತೆಗಳಲ್ಲಿ ೧೮ ರಿಂದ ೨೦ ಧಾರ್ಮಿಕ ಸ್ಥಳಗಳಿವೆ. ಅವುಗಳನ್ನು ತೆರವು ಮಾಡದೆ ಡೈವರ್ಶನ್ ನೀಡಿದ್ದಿರಿ. ನಮ್ಮ ದರ್ಗಾವನ್ನ ಮೊದಲು ತೆರವುಗೊಳಿಸುವ ಅಗತ್ಯ ಏನಿತ್ತು. ರಾಜಕೀಯ ದುರುದ್ದೇಶದಿಂದ ಮುಂಬರುವ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಮಾಡಿದ್ದಾರೆ.ಸಿಎಂ ಬೊಮ್ಮಾಯಿ ಅವರು ನಿನ್ನೆ ಸ್ಪಷ್ಟವಾಗಿ ನಾನು ಇದರಲ್ಲಿ ಅಸಹಾಯಕನಿದ್ದೇನೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿದ ಒತ್ತಡವಿದೆ ಎಂದಿದ್ದಾರೆ. ಡಿ.೧೬ ರಂದು ಕೋರ್ಟ್ ಆದೇಶ ಬಂದಿದ್ದು, ನಾವು ರಿಟ್ ಅಪೀಲ್ ಮಾಡಿದ್ದೇವೆ. ಇಷ್ಟೊಂದು ತರಾತುರಿಯಲ್ಲಿ ಕೋರ್ಟ್ ರಜೆ ಇದ್ದಾಗ ಈ ರೀತಿ ಮಾಡಿದ್ದಾರೆ ಎಂದು ವಕೀಲ ಎಂ.ಆರ್. ಮುಲ್ಲಾ ಅಂಜುಮನ್ ಹೇಳಿದರು.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *