ಹುಬ್ಬಳ್ಳಿ: ಖ್ಯಾತ ವಾಸ್ತುಶಾಸ್ತ್ರದ ತಜ್ಞ ಚಂದ್ರಶೇಖರ ಗುರೂಜಿಯವರ ಕೊಲೆಯಲ್ಲಿ ಭಾಗಿಯಾದವರು ಮಹಾಂತೇಶ ಶಿರೋಳ್ ಹಾಗೂ ಮಂಜುನಾಥ ಮರೆವಾಡ ಎಂಬುವುದಾಗಿ ಪೊಲೀಸ್ ಮಾಹಿತಿ ಲಭ್ಯವಾಗಿದೆ.
ಭಕ್ತರ ಸೋಗಿನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು , ಸಿಸಿ ಟಿವಿ ಜಾಡನ್ನು ಹಿಡಿದು ಹೊರಟ ಪೋಲಿಸರಿಗೆ ಗುರೂಜಿಯ ಆಪ್ತರಿಂದಲೇ ಕೊಲೆಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ . ಈಗಾಗಲೇ ಮಹಾಂತೇಶ ಶಿರೂಳ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು , ಇಬ್ಬರು ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಿದ್ದು , ಮಂಜುನಾಥ ಮರೆವಾಡ ಹಾಗೂ ಮಹಾಂತೇಶ ಶಿರೂಳ್ ಎಂಬುವಂತ ಮಾಹಿತಿ ಲಭ್ಯವಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news





