Breaking News

16 ಮಂದಿ ಸೈನಿಕರ ಅಪಘಾತ : ಮೃತದೇಹ ರವಾನೆ


ಬಾಗ್‌ಡೋಗರಾ/ ಗ್ಯಾಂಗ್ಟಕ್‌ (ಪಿಟಿಐ): ಸಿಕ್ಕಿಂನ ಝೆಮಾ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 16 ಮಂದಿ ಸೈನಿಕರ ಮೃತದೇಹಗಳಿಗೆ ಪಶ್ಚಿಮ ಬಂಗಾಳದ ಬಾಗ್‌ಡೊಗರ ವಿಮಾನ ನಿಲ್ದಾಣದಲ್ಲಿ ಶನಿವಾರ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

‘ವಾಯುಪಡೆಯ ವಿಶೇಷ ವಿಮಾನಗಳಲ್ಲಿ 15 ಸೈನಿಕರ ಮೃತದೇಹಗಳನ್ನು ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಬಿಹಾರದ ಒಬ್ಬ ಸೈನಿಕನ ಮೃತದೇಹವನ್ನು ರಸ್ತೆ ಮಾರ್ಗದ ಮೂಲಕವಾಗಿ ಕಳುಹಿಸಿಕೊಡಲಾಯಿತು’ ಎಂದು ಸೇನೆ ತಿಳಿಸಿದೆ.

16 ಮಂದಿ ಸೈನಿಕರ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಸಿಕ್ಕಿಂನ ಗ್ಯಾಂಗ್ಟಕ್‌ಗೆ ಸೇನಾ ವಾಹನಗಳಲ್ಲಿ ಮೃತದೇಹಗಳನ್ನು ತರಲಾಗಿತ್ತು. ಈ ವೇಳೆ ಸಿಕ್ಕಿಂನ ರಾಜ್ಯಪಾಲ ಗಂಗಾ ಪ್ರಸಾದ್‌, ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌, ತ್ರಿಶಕ್ತಿ ವಿಭಾಗದ ಜನರಲ್‌ ಕಮಾಂಡರಿಂಗ್‌ ಅಧಿಕಾರಿ ಲೆಫ್ಟಿನೆಂಟ್‌ ಜನರಲ್‌ ವಿಪಿಎಸ್‌ ಕೌಶಿಕ್‌, ಸೇನಾ ಹಾಗೂ ವಾಯು ಪಡೆಯು ಅಧಿಕಾರಿಗಳು ಸೈನಿಕರಿಗೆ ನಮನ ಸಲ್ಲಿಸಿದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *