ಹುಬ್ಬಳ್ಳಿ: ದೆಹಲಿಯಲ್ಲಿ ಜನೆವರಿ 3ರಿಂದ 8ರವರೆಗೆ ನಡೆಯಲಿರುವ 44ನೇ ಸಬ್ ಜೂನಿಯರ್ ನ್ಯಾಶನಲ್ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಧಾರವಾಡ ಜಿಲ್ಲೆಯಿಂದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.
ಹುಬ್ಬಳ್ಳಿಯ ಬ್ಯಾಹಟ್ಟಿ ಶಾಲಾ ಮೈದಾನದಲ್ಲಿ ರಾಜ್ಯ ಬಾಲಕ-ಬಾಲಕಿಯರ ವಾಲಿಬಾಲ್ ತಂಡಕ್ಕೆ ಆಟಗಾರರ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು. ಸಬ್ ಜೂನಿಯರ್ ನ್ಯಾಶನಲ್ ವಾಲಿಬಾಲ್ ಚಾಂಪಿಯನ್ಸ್ ಶಿಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಕರ್ನಾಟಕ ವಾಲಿಬಾಲ್ ಸಂಸ್ಥೆ ಅಡಹಾಕ್ ಸಮಿತಿ ಸದಸ್ಯ ಎಂ.ಎಂ. ಗುಡಿ ನೇತೃತ್ವದಲ್ಲಿ ನೂರಾರು ಕ್ರೀಡಾಪಟುಗಳ ಅಭ್ಯಾಸ ತರಬೇತಿಗಳನ್ನು ವೀಕ್ಷಣೆ ಮಾಡಿ, ನಂತರ ಸೂಕ್ತ ಆಟಗಾರರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

