Breaking News

ಐಪಿಎಸ್ ಅಧಿಕಾರಿ ಆರ್. ದಿಲೀಪ್ ನಿಧನ

ಬೆಂಗಳೂರು: ಐಪಿಎಸ್ ಅಧಿಕಾರಿ ಆರ್. ದಿಲೀಪ್ ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ದಿಲೀಪ್ ಅವರು ಡಿಐಜಿಯಾಗಿದ್ದರು. ಹುಬ್ಬಳ್ಳಿ ಧಾರವಾಡದಲ್ಲಿ ಕಮಿಷನರ್ ಆಗಿ ಉತ್ತಮ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದು, ಯಕೃತ್ತು ಕಸಿ ಮಾಡಿಸಲಾಗಿತ್ತು. ಚಿಕಿತ್ಸೆ ಬಳಿಕ ದಿಲೀಪ್ ಅವರು ಮತ್ತೆ ಕರ್ತವ್ಯಕ್ಕೆ ಮರಳಿದ್ದರು. ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅಪೋಲೊ ಅಸ್ಪತ್ರೆಗೆ ಮತ್ತೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆರ್.ದಿಲೀಪ್ ರವರ ನಿಧನದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೋಲಿಸ್ ಸಿಬ್ಬಂದಿಗಳು ಕಂಬನಿ ಸುರಿಸಿದರು.

Share News

About BigTv News

Check Also

ಟಗರು ಕಾಳಗದ ವೇಳೆ ಜಗಳ: ಚಾಕು ಇರಿತ

ಹೊಳೆಹೊನ್ನೂರು: ಸಮೀಪದ ಆನವೇರಿಯಲ್ಲಿ ಬುಧವಾರ ಟಗರು ಕಾಳಗ ವೀಕ್ಷಿಸಲು ಬಂದಿದ್ದ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಸುನೀಲ್ …

Leave a Reply

Your email address will not be published. Required fields are marked *