Breaking News

ಮಹದಾಯಿ ವಿಚಾರದಲ್ಲಿ ಬಿಜೆಪಿ ಉ. ಕ. ಜನರಿಗೆ ದ್ರೋಹ, ಮೋಸ ಮಾಡುತ್ತಿದೆ : ಡಿಕೆಶಿ ಆರೋಪ


ಹುಬ್ಬಳ್ಳಿ:  ಮಹದಾಯಿ ವಿಚಾರದಲ್ಲಿ ಬಿಜೆಪಿಯವ್ರು ಉತ್ತರ ಕರ್ನಾಟಕದ ಜನರಿಗೆ ದ್ರೋಹ, ಮೋಸ ಮಾಡುತ್ತಿದ್ದಾರೆಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,  ತ್ರಿಬಲ್ ಇಂಜಿನ್ ಸರ್ಕಾರ ಜನರಿಗೆ ನ್ಯಾಯ ಒದಗಿಸಬೇಕು. ಜನ ನಮ್ಮ ಬೆಂಬಲ ನೀಡುತ್ತಾರೆ ಅಂತಾ ತರಾತುರಿಯಲ್ಲಿ ಡೇಟ್ ಇಲ್ಲದೆ ಇರುವ ಕಾಗದ ತೋರಿಸಿದ್ದಾರೆ. ರಾಜಕೀಯ ಲಾಭಕೊಸ್ಕರ ಸುಳ್ಳು ಹೇಳುತ್ತಿದ್ದಾರೆ.‌ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಸುಳ್ಳು ಹೇಳಿ ಚಾಕಲೆಟ್ ಕೊಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ 2ನೇ ತಾರೀಖು ನಮ್ಮ ಪ್ರತಿಭಟನೆ, ಜನರ ಧ್ವನಿ  ಹೋರಾಟ ನಿಲ್ಲಲ್ಲ ಎಂದು ಹೇಳಿದರು.

ಇನ್ನೂ 2023ರ ಚುನಾವಣೆ ನಂತರ ನಮ್ಮ ಸರ್ಕಾರ ಮುಂದೆ ಬಂದೇ ಬರುತ್ತೆ. ಕಳಸಾ- ಬಂಡೂರಿಗೆ ನ್ಯಾಯ ಕೊಟ್ಟೇ ಕೊಡ್ತೀವಿ, ಸುಳ್ಳು ಪೇಪರ್ ತೋರಿಸಿ ಐವಾಷ್ ಮಾಡುತ್ತಿದ್ದಾರೆ. ಮಹದಾಯಿ ಕಾಮಗಾರಿ ಪ್ರಾರಂಭಿಸದೆ, ಜನರಿಗೆ ದ್ರೋಹ ಮಾಡುತ್ತಿದ್ದಾರೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು. ಇನ್ನೂ ಮೀಸಲಾತಿ ವಿಚಾರವಾಗಿ ಸರ್ವರಿಗೂ ಸಮಬಾಳು, ಸಮಪಾಲು,ಜನಸಂಖ್ಯೆ ಆಧಾರದ ಮೇಲೆ ಎಲ್ಲರೂ ತಮ್ಮ ಹಕ್ಕು ಕೇಳ್ತಾರೆ. ಮೀಸಲಾತಿ ಅಂತಾ ಹೇಳಿ ಬಿಜೆಪಿಯವರು ಚಾಕಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಇಂದು ಸಂಜೆ ಸಿದ್ದರಾಮಯ್ಯ, ಮುಖಂಡರ ಜೊತೆ ಚರ್ಚಿಸಿ ನಮ್ಮ ಪಕ್ಷದ ಅಚಲ ನಿರ್ಧಾರ ಪ್ರಕಟಿಸುತ್ತೇವೆ. ಜಾರಿಯಾಗದ ಮೀಸಲಾತಿ ತಂದು ಕರ್ನಾಟಕವನ್ನು ಲಿಟಿಗೇಷನ್ ರಾಜ್ಯ ಮಾಡುತ್ತಿದ್ದಾರೆಂದು ಡಿಕೆಶಿ ತಿಳಿಸಿದರು.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *