ಬೀಜಿಂಗ್: ಕೋವಿಡ್ ಸಾಂಕ್ರಾಮಿಕತೆಯಿಂದ ತತ್ತರಿಸುತ್ತಿರುವ ಚೀನಾದಲ್ಲಿ ಜನವರಿ ಕೊನೆ ಹೊತ್ತಿಗೆ ಪ್ರತಿ ದಿನ ಸುಮಾರು 25,000 ಜನರು ರೋಗಕ್ಕೆ ಬಲಿಯಾಗಬಹುದು ಎಂಬ ಭೀತಿ ಉಂಟಾಗಿದೆ. ಏಪ್ರಿಲ್ ವೇಳೆಗೆ ದೇಶದಲ್ಲಿ 17 ಲಕ್ಷ ಜನರು ಸಾಯುವ ಆತಂಕ ಸೃಷ್ಟಿಯಾಗಿದೆ.
ಕರೊನಾ ನಿಯಂತ್ರಣ ನಿಯಮಗಳಿಲ್ಲದೆ ಮೊದಲ ಚಾಂದ್ರಮಾನ ಹೊಸ ವರ್ಷದ ಹಬ್ಬದ ಆಚರಣೆ ನಡೆಯಲಿದ್ದು ಆಗ ಸಾಂಕ್ರಾಮಿಕತೆ ಭಾರಿ ಪ್ರಮಾಣದಲ್ಲಿ ಸ್ಪೋಟಗೊಳ್ಳಬಹುದು ಎಂಬ ಭಯ ಕಾಡತೊಡಗಿದೆ.
140 ಕೋಟಿ ಜನಸಂಖ್ಯೆಯ ದೇಶದಲ್ಲಿ ವಾರ್ಷಿಕ ರಜೆಯ ಎರಡನೇ ದಿನವಾದ ಜನವರಿ 23ರಂದು ವೈರಸ್ನಿಂದ ಸಾಯುವವರ ಸಂಖ್ಯೆ ಉತ್ತುಂಗಕ್ಕೆ ತಲುಪಬಹುದು ಎಂದು ಲಂಡನ್ ಮೂಲದ ಸಂಶೋಧನಾ ಸಂಸ್ಥೆ ಏರ್ಫಿನಿಟಿ ಹೇಳಿದೆಯೆಂದು ಬ್ಲೂಮ್ಗ್ ವರದಿ ಮಾಡಿದೆ. ಚೀನಾದಲ್ಲಿ ಸದ್ಯಕ್ಕೆ ದೈನಿಕ 9,000 ಸಾವು ಹಾಗೂ 1.8 ಮಿಲಿಯನ್ ಜನರಿಗೆ ಸೋಂಕು ತಗಲಬಹುದು ಎಂದು ಏರ್ಫಿನಿಟಿ ಅಂದಾಜು ಮಾಡಿದೆ. ಏಪ್ರಿಲ್ ಕೊನೆ ಹೊತ್ತಿಗೆ 1.7 ಮಿಲಿಯನ್ ಜನರು ಮೃತಪಡುವ ಅಂದಾಜಿದೆ ಎಂದೂ ಹೇಳಿದೆ. ಅದು ಈ ತಿಂಗಳ ಆರಂಭದಲ್ಲಿ, ದೈನಿಕ 5,000 ಸಾವಿನ ಅಂದಾಜು ಮಾಡಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

