Breaking News

ತಾಯಿ ಕುರಿತು ಮನದಾಳದ ಮಾತು ಹೇಳಿದ ಪ್ರಧಾನಿ


ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಯಿ ಹೀರಾಬೆನ್‌ ಎಂದರೆ ಪಂಚಪ್ರಾಣ. ವಿನಮ್ರ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಮ್ಮನ್ನು ಭಾರತದ ಪ್ರಧಾನಿ ಮಾಡುವ ನಿಟ್ಟಿನಲ್ಲಿ ತಾಯಿ ಹೀರಾಬೆನ್‌ ನೀಡಿದ ಕೊಡುಗೆಯನ್ನು ಆಗಾಗ್ಗೆ ಎತ್ತಿ ತೋರಿಸಿದ್ದರು.

ಶುಕ್ರವಾರ ನಿಧನರಾದ ಹೀರಾಬೆನ್‌ ಅವರು ಈ ವರ್ಷ ಜೂನ್‌ 18ರಂದು 99 ವರ್ಷ ಪೂರೈಸಿ ತಮ್ಮ ಜೀವನದ 100ನೇ ವರ್ಷಕ್ಕೆ ಕಾಲಿಟ್ಟಿದ್ದರು. ಆಗ ಮೋದಿ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮ ತಾಯಿಯ ಬಗ್ಗೆ ಅತ್ಯಂತ ವಿವರವಾದ ಅನಿಸಿಕೆಗಳನ್ನು ಬ್ಲಾಗ್‌ನಲ್ಲಿ ಬರೆದಿದ್ದರು. ತಾಯಿಯ ತ್ಯಾಗ ಮತ್ತು ಅವರ ಜೀವನದ ವಿವಿಧ ಅಂಶಗಳನ್ನು ಎತ್ತಿ ತೋರಿಸಿದ್ದರು. ತಾಯಿಯ ಜೀವನ ಶೈಲಿಯೇ ತಮ್ಮ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ ಎಂದಿದ್ದರು.

ತಾಯಿ ಕಲಿಸಿದ ಪಾಠಗಳು: ಔಪಚಾರಿಕವಾಗಿ ಶಿಕ್ಷಣ ಪಡೆಯದೆ ಜೀವನದಲ್ಲಿ ಸಾಕಷ್ಟುಕಲಿಯಲು ಸಾಧ್ಯ ಎಂದು ನನ್ನ ತಾಯಿ ತೋರಿಸಿದ್ದರು. ಅದು ಅಮ್ಮ ಕಲಿಸಿದ ಜೀವನ ಪಾಠವಾಗಿತ್ತು. ಎಲ್ಲಾ ತಾಯಂದಿರಂತೆಯೇ ನನ್ನ ತಾಯಿ ಎಷ್ಟುಅಸಾಧಾರಣಳೋ ಅಷ್ಟೇ ಸರಳ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಹೇಳಿದ್ದರು. ತಮ್ಮ ಸರ್ಕಾರದ ಹಲವಾರು ಕಲ್ಯಾಣ ಯೋಜನೆಗಳ ಪೈಕಿ ಗರೀಬ್‌ ಕಲ್ಯಾಣ. (ಬಡವರ ಕಲ್ಯಾಣ) ಮೇಲೆ ಅತೀವ ಗಮನ ಹರಿಸಲು ನನ್ನ ತಾಯಿಯೇ ಪ್ರೇರಣೆ ಎಂದಿದ್ದರು.

‘ನಾನು 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವನಿದ್ದೆ. ಆಗ ನನ್ನ ತಾಯಿಯು, ‘ನೀನು ಸರ್ಕಾರದಲ್ಲಿ ಏಕೆ ಕೆಲಸ ಮಾಡುತ್ತಿದ್ದೀಯಾ ಎಂದು ಎಂದು ನನಗೆ ತಿಳಿದಿಲ್ಲ ಆದರೆ ನೀನು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದರು. ಹೀಗಾಗಿ ನನ್ನ ತಾಯಿ ನನ್ನ ಜೀವನದಲ್ಲಿ ದೊಡ್ಡ ಶಿಕ್ಷಕಿ ಇದ್ದ ಹಾಗೆ. ಇತರ ಶಾಲಾ ಶಿಕ್ಷಕಿಯರ ಜತೆ ಅಮ್ಮನನ್ನೂ ಗೌರವಿಸಲು ಬಯಸಿದ್ದೆ’ ಎಂದು ಹೇಳಿದ್ದರು.

ಆದರೆ, ನನ್ನ ತಾಯಿಗೆ ಪ್ರಧಾನಿಯ ಅಮ್ಮ ಎಂಬ ಅಹಂ ಇರಲಿಲ್ಲ. ತಾನು ಸಾಮಾನ್ಯ ವ್ಯಕ್ತಿ ಎನ್ನುತ್ತಿದ್ದರು. ‘ನಾನು ನಿನಗೆ ಜನ್ಮ ನೀಡಿರಬಹುದು ಆದರೆ ನೀನು ಸರ್ವಶಕ್ತರಿಂದ (ದೇವರಿಂದ) ಪಾಠ ಕಲಿತಿರುವೆ ಮತ್ತು ಬೆಳೆದಿರುವ ಎಂದು ಹೇಳುತ್ತಿದ್ದರು. ಆಕೆಯ ಆಲೋಚನಾ ಕ್ರಮ ಮತ್ತು ದೂರದೃಷ್ಟಿಯ ಚಿಂತನೆಯು ನನಗೆ ಯಾವಾಗಲೂ ಆಶ್ಚರ್ಯವನ್ನುಂಟು ಮಾಡಿತ್ತು ಎಂದು ಮೋದಿ ಬರೆದಿದ್ದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *