Breaking News
Featured Video Play Icon

ಮಾದಕ ವ್ಯಸನಿಗಳಿಗೆ ಬಿಸಿ ಮುಟ್ಟಿಸಲು ಫೀಲ್ಡ್ ಗಿಳಿದ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್

ಹುಬ್ಬಳ್ಳಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲಾ ಒಂದು ಘಟನೆಗಳು ನಡೆಯುತ್ತಾ ಇರುತ್ತವೆ. ಇನ್ನು ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚಾಕು ಇರಿತದ ಪ್ರಕರಣ, ಕೊಲೆ ಪ್ರಕರಣ, ರೌಡಿಗಳ ಹಾವಳಿ, ಮಾದಕ ವ್ಯಸನಿಗಳಿಗೆ ಕಡಿವಾಣ ಹಾಕಲು ಖಾಕಿ ಪಡೆ ಮುಂದಾಗಿದೆ.ನಗರದಲ್ಲಿ ರೌಡಿಗಳಿಗೆ, ಡ್ರಗ್ ಪೆಡ್ಲರ್ಸ್ ಗಳಿಗೆ ಪರೇಡ್ ನಡೆಸುವ ಮೂಲಕ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪುಂಡ ಪೋಕರಿಗಳಿಗೆ ಹಾಗೂ ಮಾದಕ ವ್ಯಸನಿಗಳಿಗೆ ಬಿಸಿ ಮುಟ್ಟಿಸಲು ಸ್ವತಃ ಫೀಲ್ಡ್ ಗೆ ಇಳಿದಿದ್ದಾರೆ.ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ವಿಶಾಲ ನಗರದ ಬಳಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *