ಶಿರಾ: ಇಬ್ಬರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ. ಮೃತರನ್ನು ರಾಬಿಯಾ (32) ಹಾಗೂ ಅವರ ಮಕ್ಕಳಾದ ತಮನ್ನಾ (9) ಮತ್ತು ಸಿಮ್ರಾನ್ (4) ಎಂದು ಗುರುತಿಸಲಾಗಿದೆ. ರಾಬಿಯಾ ಅವರಿಗೆ ನಿವೇಶನ ಮಂಜೂರಾಗಿದ್ದರೂ ಅಧಿಕಾರಿಗಳು ನೀಡಲು ವಿಳಂಬ ಮಾಡಿದ್ದರಿಂದ ಅವರು ಹಲವು ಬಾರಿ ಹೋರಾಟ ನಡೆಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ನಗರಸಭೆ ಸಭೆಯಲ್ಲೂ ರಾಬಿಯಾಗೆ ನೀಡಿದ್ದ ನಿವೇಶನದ ಕುರಿತು ಚರ್ಚೆ ನಡೆದಿದ್ದು, ಅಕ್ರಮ ಮನೆ ನಿರ್ಮಾಣದ ಆರೋಪವೂ ಕೇಳಿಬಂದಿತ್ತು. ಇದರಿಂದ ನೊಂದೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರ ಸಾವಿಗೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

