Breaking News

ಬಿಜೆಪಿ ಗೋಡ್ಸೆ ಸಂಸ್ಕೃತಿ; ಸುರ್ಜೆವಾಲಾ ಕಿಡಿ…

ಹುಬ್ಬಳ್ಳಿ:ಕಳಸಾ ಬಂಡೂರಿಗೆ ಬಜೆಟ್ ನಲ್ಲಿ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಒಂದು ತಿಂಗಳಿರುವಾಗ ಹೇಗೆ ಬಿಡುಗಡೆ ಮಾಡ್ತೀರಿ..? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನೆ ಮಾಡಿದ್ದಾರೆ.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇದು ಬೊಮ್ಮಾಯಿ ಅವರ ಮತ್ತೊಂದು ಸುಳ್ಳು. ಮುಂದೆ ನಾವೇ ಮತ್ತೆ ಬಜೆಟ್ಮಂ

ಡಿಸುತ್ತೇವೆ. ಮಹಾದಾಯಿ ಯೋಜನೆಯನ್ನು ನಾವೇ ಪೂರ್ಣಗೊಳಿಸುತ್ತೇವೆ. ನಮ್ಮ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನ ಕಾಪಿ ಮಾಡಲಾಗಿದೆ. ನಮ್ಮನ್ನು ಕಾಪಿ ಮಾಡುವುದಕ್ಕೆ ಯತ್ನಿಸಿ ಅಲ್ಲಿಯೂ ವಿಫಲವಾಗಿದ್ದಾರೆ.ಕಾಪಿ ಮಾಡೋಕೂ ಜಾಣ್ಮೆ ಬೇಕು ಎಂದು

ವ್ಯಂಗ್ಯವಾಡಿದರು.ಟಿಪ್ಪು ಮುಗಿಸಿದಂತೆ ಸಿದ್ಧರಾಮಯ್ಯರನ್ನು ಮುಗಿಸಬೇಕೆಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯದ್ದು ಏನಿದ್ದರೂ ಗೋಡ್ಸೆ ಸಂಸ್ಕೃತಿಗಾಂಧಿ ಕೊಂದ ಸಂಸ್ಕೃತಿ ಗೋಡ್ಸೆದು. ಅದೇ ಸಂಸ್ಕೃತಿ ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನೂ ಕೊಂದಿತು.ಪಂಜಾಬಿನ ಸರ್ದಾರ್ ಬೇನ್ ಸಿಂಗ್ ರನ್ನೂ ಕೊಂದಿತು.ನೂರಾರು ಕಾರ್ಯಕರ್ತರು ಭಾರತ ಉಳಿವಿಗೆ ಜೀವ ತ್ಯಾಗ ಮಾಡಿದ್ದಾರೆ. ನಾವು ಮತ್ತೆ ಮತ್ತೆ ಜೀವ ತ್ಯಾಗಕ್ಕೆ ಸಿದ್ಧ. ನಾವು ವಿಧ್ವಂಸ ಪ್ರೋತ್ಸಾಹ ಮಾಡಲ್ಲ. ಪ್ರೀತಿಯ ಸಂದೇಶ ಸಾರುವವರು ಅಶ್ವತ್ಥ ನಾರಾಯಣರನ್ನು ಕೂಡಲೆ ಬಂಧಿಸಬೇಕು. ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದರು.ಚುನಾವಣೆಯಲ್ಲಿ ಸೋಲುತ್ತೇವೆ ಅಂತ ಈ ರೀತಿ ಹೇಳಿಸುತ್ತಿದ್ದಾರೆ. ಮಾತನಾಡಿದ್ದು ಅಶ್ವತ್ಥನಾರಾಯಣ,ಆದರೆ ಅದರ ಹಿಂದೆ ಜೆಪಿ ನಡ್ಡಾ, ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ನಳಿನಕುಮಾರ್ ಕಟೀಲ್ ಇದ್ದಾರೆ. ಚುನಾವಣೆ ಸೋಲಿನಿಂದ ಬಚಾವಾಗಲು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *