ಪ್ರಶ್ನೆಗಳಿಗೆ ಸಿಡಿಮಿಡಿ ಮಾಡಿದಹುಬ್ಬಳ್ಳಿ : ಮಾಜಿ ಸಚಿವ ಆರ್.ಶಂಕರ್ ನಿವಾಸದಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ ಹಿಂದೆಬಿಜೆಪಿ ಪಾತ್ರವಿಲ್ಲ. ಬಿಜೆಪಿ ಪ್ರೇರಿತ ದಾಳಿ ಎನ್ನುವುದುಸುಳ್ಳು. ತನಿಖಾ ಸಂಸ್ಥೆಗಳಿಗೆ ಎಷ್ಟು ಮುಕ್ತವಾತಾವರಣ ನೀಡಿದ್ದೇವೆ ಎನ್ನುವುದಕ್ಕೆ ಈ ಪ್ರಕರಣಸಾಕ್ಷಿ.ಯಾರೇ ತಪ್ಪು ಮಾಡಿದ್ರೂ ಅವರನ್ನು ಶಿಕ್ಷಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಂಕರ್ ಪ್ರಕರಣದಲ್ಲಿಯೂ ತನಿಖಾ ಸಂಸ್ಥೆಗಳು ತಮ್ಮದೇ ಆದ ಕ್ರಮ ಕೈಗೊಳ್ಳುತ್ತದೆ. ಸಿಟಿ ರವಿ ವರ್ಸಸ್ ವಿಜಯೇಂದ್ರ ಮಾತಿನ ಚಕಮಕಿ ವಿಚಾರದ ಪ್ರಶ್ನೆ ಕೇಳಿದ ಮಾಧ್ಯಮದವರ ವಿರುದ್ಧ ಸಿಎಂ ಸಿಡಿಮಿಡಿಗೊಂಡರು.ಎಲ್ಲವೂ ಮಾಧ್ಯಮಗಳ ಸೃಷ್ಟಿ, ಸಚಿವ ಸೋಮಣ್ಣ ದೆಹಲಿಗೆ ಹೋಗ್ತಿರೋ ವಿಚಾರ ನನಗೆ ಗೊತ್ತಿದೆ ಎಂದು ಸಿಟ್ಟಿನಿಂದಲೇ ಉತ್ತರಿಸಿ ಮುಂದೆ ಸಾಗಿದರು.
