Breaking News

KPSC ಅಕ್ರಮ ನೇಮಕಾತಿ ಪ್ರಕರಣ; ಬಸವರಾಜ್ ಕನ್ನಾಳೆ ಆಪ್ತ ಪವನ್ ರೆಡ್ಡಿ ಮನೆ ಮೇಲೆ CID ದಾಳಿ

ಬೀದರ್: ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತ ಬಸವರಾಜ್ ಕನ್ನಾಳೆ ಆಪ್ತ ಪವನ್ ರೆಡ್ಡಿ ಮನೆ ಮೇಲೆ ಕಲಬುರಗಿ ವಿಭಾಗೀಯ ಸಿಐಡಿ ತಂಡ ದಾಳಿ ನಡೆಸಿದೆ. ಚಿಟ್ಟಗುಪ್ಪ ತಾಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿರುವ ಪವನ್ ರೆಡ್ಡಿ ಮನೆ ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಅಧಿಕಾರಿಗಳು, ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಮನೆಯವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಬಸವರಾಜ್ ಕನ್ನಾಳೆ ಹಾಗೂ ಪವನ್ ರೆಡ್ಡಿ ನಡುವೆ ಕೋಟ್ಯಂತರ ರೂ. ಹಣಕಾಸು ವ್ಯವಹಾರ ನಡೆದಿರುವ ಶಂಕೆಯಿದ್ದು, ಕೆಪಿಎಸ್‌ಸಿ ಅಕ್ರಮ ನೇಮಕಾತಿ ವ್ಯವಹಾರದಲ್ಲಿ ಪವನ್ ರೆಡ್ಡಿ ಪಾಲುದಾರನಾಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಮುಂದುವರಿಸಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *