Breaking News

ACP ಆಫೀಸ್, ನಿಂದ ಕಿಕ್ ಔಟ್ ,.? ದುರ್ನಡತೆ ಹಿನ್ನೆಲೆ ಹೆಡ್ ಕಾನ್ಸ್‌ಟೇಬಲ್ ವರ್ಗಾವಣೆ ಮಾಡಿದ ಕಮಿಷನರ್..

ಹುಬ್ಬಳ್ಳಿ: ಕಾನೂನಾತ್ಮಕ ಹಿತ ದೃಷ್ಟಿಯಿಂದ ಹಳೇ ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಗುಳೇಶ್’ನನ್ನು ಹು-ಧಾ ಪೊಲೀಸ್ ಕಮೀಷನರ್ ರಮನ್ ಗುಪ್ತಾ ಅವರು ಧಾರವಾಡ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಗುಳೇಶ್ ಸದ್ಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು ಕೂಡಾ ಅಲ್ಲಿ ಕರ್ತವ್ಯ

ನಿರ್ವಹಿಸದೆ ತನ್ಮ ಪ್ರಭಾವ ಬಳಸಿ ದಕ್ಷಿಣ ಉಪ ವಿಭಾಗದ ಎಸಿಪಿ ಆರ್ ಕೆ ಪಾಟೀಲ್ ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.ತಾನು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ತನ್ನದೇ ರೀತಿಯಾದ ಸ್ಟೈಲ್ ನಲ್ಲಿ ನಿರ್ವಹಿಸುವದನ್ನೇ ರೂಢಿ ಮಾಡಿಕೊಂಡು ಬಂದಿದ್ದ ಈತನ ವರ್ತನೆಗೆ ಬೇಸತ್ತು ಕೆಲವು ಸಾರ್ವಜನಿಕರು ಹಿರಿಯ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರಂತೆ, ಇದನ್ನು ಗಂಭೀರವಾಗಿ ಪರಿಗಣಿಸಿದ ದಕ್ಷ ಪೊಲೀಸ್ ಕಮೀಷನರ್ ರಮನ್ ಗುಪ್ತಾ ಹೆಡ್ ಕಾನ್ಸ್ಟೇಬಲ್ ಗುಳೇಶ್ ನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಕೂಡಲೇ ಬಿಡುಗಡೆ ಮಾಡಿ ಧಾರವಾಡ ಸಂಚಾರಿ ಪೊಲೀಸ್ ಠಾಣೆಗೆ ವರದಿ ಮಾಡಿಕೊಳ್ಳುವಂತೆ ಆದೇಶ ಮಾಡಿದ್ದಾರೆ.ತನ್ನದೇ ಸ್ಟೈಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುಳೇಶ್ ನನ್ನು ಇದೀಗ CP RG ತಮ್ಮದೇ ಸಿಗ್ನಿಚರ್ ಸ್ಟೈಲ್ ನಲ್ಲಿ ಎತ್ತಗಂಡಿ ಮಾಡಿ, ಅರ್ಜಿ ಮಾಡಿದ ಸಾರ್ವಜನಿಕರಿಗೆ ನ್ಯಾಯವನ್ನು ಕೊಡಿಸಿದ್ದಾರೆ.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *