Breaking News

ಸ್ವಾಮೀಜಿಗಳ ಕಾರು ಅಪಘಾತ ; ಇಬ್ಬರ ಸಾವು

: ಬೆಳಗಾವಿ ತಾಲ್ಲೂಕಿನ ಹೊನಗಾ ಬಳಿಯ ಬೆನ್ನಾಳಿ ಬ್ರಿಜ್ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕ್ಯಾಂಟರ್, ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಅಪಘಾತದಲ್ಲಿ ಬೆಳಗಾವಿ ತಾಲ್ಲೂಕಿನ ಶಿವಾಪೂರ ಗ್ರಾಮದಲ್ಲಿರುವ ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಾವಿ ಕಡೆ ಬರುತ್ತಿದ್ದ ಸ್ವಾಮೀಜಿಗಳ ಕಾರು, ಮುಂದೆ ಚಲಿಸುತ್ತಿದ್ದ ಕ್ಯಾಂಟರ್ ಏಕಾಏಕಿ ನಿಧಾನವಾಗಿ ಡಿಕ್ಕಿ ಹೊಡೆದಿದೆ.

ಅಷ್ಟರಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಕಾರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಾಗೂ ಶಿವಾಪೂರ ಗ್ರಾಮದಲ್ಲಿರುವ ಶ್ರೀ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. ಅವರು ಮಠದ ಸಹಾಯಕರು ಅಥವಾ ಭಕ್ತರಿರಬಹುದು ಎಂದು ಊಹಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸ್ಥಳಕ್ಕಾಗಮಿಸಿದ ಪಿಐ ಸಿನ್ನೂರ, ಕಾಕತಿ ಪಿಎಸ್‌ಐ ಮಂಜುನಾಥ ಹುಲಕುಂದ, ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *