ಲಂಚದ ಆಸೆಗೆ ಇಲಾಖೆಯ ಗೌರವ ಹಾಳು ಮಾಡಿದ ಸಿಬ್ಬಂದಿ..? ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೇ ಹಾಡುಹಗಲೇ ನಡೆಯುತ್ತಿದೆ. ಹೀಗಿದ್ದರೂ ಪೊಲೀಸ್ ಇಲಾಖೆ ಮಾತ್ರ ಕಣ್ಣು ಕಾಣದಂತೆ ಜಾಣಮೌನತನ ವಹಿಸಿದೆ. ಮಟ್ಕಾ ದಂಧೆಯ ಎಕ್ಸಕ್ಲೂಸಿವ್ ದೃಶ್ಯಗಳು ಇಲ್ಲಿವೆ ನೋಡಿ…? ನೋಡಿದ್ರಲ್ಲ ವೀಕ್ಷಕರೇ ಇದು
ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಲಗಾಮ ಹಾಕಲು ಸಾಧ್ಯವಾಗುತ್ತಿಲ್ಲ. ಹಗಲು ಹೊತ್ತಿನಲ್ಲಿಯೇ ಮಟ್ಕಾ ದಂಧೆ ನಡೆಯುತ್ತಿದೆ. ಮಾಹಿತಿ ಪೊಲೀಸರಿಗೆ ಇದೆಯೋ ಅಥವಾ ಇಲ್ಲವೋ…? ಮಾಹಿತಿ ಇದ್ದರೂ ಯಾಕೆ ಲಂಚದ ಆಸೆಗೆ ಸುಮ್ಮನೆ ಕುಳಿತಿದ್ದಾರೋ..? ಎಂಬುವಂತ ಅನುಮಾನ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.ಬಿಗ್ ಟಿವಿಯ ರಹಸ್ಯ ಕಾರ್ಯಾಚರಣೆ ವೇಳೆಯಲ್ಲಿ ಮಟ್ಕಾ ದಂಧೆಯ ಕಿಂಗ್ ಫಿನ್ ಪೊಲೀಸರಿಗೆ 50,000 ಮಂತ್ಲಿ ಕೊಡುವ ಬಗ್ಗೆ ಕೂಡ ಬಾಯಿ ಬಿಟ್ಟಿರುವುದು ಸಾರ್ವಜನಿಕ ಸಮಾಜವನ್ನು ಹಾಗೂ ಪೊಲೀಸ್ ಇಲಾಖೆಯನ್ನು ತಲೆ ತಗ್ಗಿಸುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

