ಪುಣೆ: ಹೆಂಡತಿ ಮತ್ತು ಅಳಿಯನಿಗೆ ಗುಂಡು ಹಾರಿಸಿ ಹತ್ಯೆಗೈದು ತಾವೂ ಶೂಟ್ ಮಾಡಿಕೊಂಡು ಸಹಾಯಕ ಪೊಲೀಸ್ ಕಮಿಷನ (ಎಸಿಪಿ) ಮೃತಪಟ್ಟ ಘಟನೆ ಸೋಮವಾರ ಪುಣೆಯಲ್ಲಿ ನಡೆದಿದೆ.ಎಸಿಪಿ ಭರತ್ ಗಾಯಕ್ವಾಡ್, ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಮೃತರು. ಘಟನೆಗೆ ಕಾರಣವೇನು ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು.ಬೆಳಗ್ಗಿನ ಜಾವ 3.30 ರ ಸುಮಾರಿಗೆ ಮೊದಲು ಹೆಂಡತಿಗೆ ಶೂಟ್ ಮಾಡಿದ್ದಾರೆ. ಗುಂಡಿನ ಶಬ್ದ ಕೇಳಿ ಮಗ ಮತ್ತು ಅಳಿಯ ಓಡಿ ಬಂದು ಬಾಗಿಲು ತೆರೆದ ವೇಳೆ ಅಳಿಯನಿಗೆ ಗುಂಡು ಹಾರಿಸಿ ತಾವೂ ಶೂಟ್ ಮಾಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





